ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ಆಂಬ್ಯುಲೆನ್ಸ್ ದುರ್ಬಳಕೆ

ಚಿತ್ರದುರ್ಗ : ರೋಗಿಗಳನ್ನು ಸಾಗಿಸಬೇಕಿದ್ದ ಆಂಬ್ಯುಲೆನ್ಸ್ ನಲ್ಲಿ ಕುರ್ಚಿ ಸಾಗಿಸಿ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ. ಚಿತ್ರದುರ್ಗದ ತರಾಸು ರಂಗಮಂದಿರದ ಸಮೀಪ ಈ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ತರಾಸು ರಂಗಂಮದಿರದಲ್ಲಿ ನಡೆಯುತ್ತಿದ್ದ ಕನ್ನಡ‌ರಾಜ್ಯೋತ್ಸವ ಕಾರ್ಯಕ್ರಮಕ್ಕೆ, ಆಂಬ್ಯುಲೆನ್ಸ್ ನಲ್ಲಿ ಕುರ್ಚಿಗಳನ್ನ ಜಿಲ್ಲಾ ಆಸ್ಪತ್ರೆಯಿಂದ ಸಾಗಿಸಲಾಯ್ತು. ಚಿತ್ರದುರ್ಗ ಮೆಡಿಕಲ್‌ ಕಾಲೇಜಿನಿಂದ‌ ಆಯೋಜಿತ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳು ಕೂಡಾ ಭಾಗಿಯಾಗಿದ್ದರು. ಬಡ ರೋಗಿಗಳಿಗೆ ಕೆಲವೊಮ್ಮೆ ಆಂಬ್ಯುಲೆನ್ಸ್ ಸಿಗದೇ ಪರದಾಡುವಂತ ಸ್ಥಿತಿ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದೆ. ಆದರೆ ಖಾಸಗಿ ಕಾರ್ಯಕ್ರಮಕ್ಕೆ ಕುರ್ಚಿ ಸಾಗಾಟ ಮಾಡೋದಕ್ಕೆ ಆಂಬ್ಯುಲೆನ್ಸ್ ದುರ್ಬಳಕೆ ಮಾಡಿದ್ದು ಎಷ್ಟು ಸರಿ ಎಂಬುದು, ಸಾರ್ವಜನಿಕರ ಪ್ರಶ್ನೆಯಾಗಿದೆ.

ಜಿಲ್ಲಾಸ್ಪತ್ರೆಯಿಂದ 500 ಮೀ ದೂರದಲ್ಲಿರುವ ತರಾಸು ರಂಗ ಮಂದಿರಕ್ಕೆ ಖಾಸಗು ವಾಹನ ಬಳಕೆ ಮಾಡದೇ ಸರ್ಕಾರಿ ಆಂಬ್ಯುಲೆನ್ಸ್ ದುರ್ಬಳಕೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಅಧಿಕಾರಿಗಳ ಮಹಾ ಯಡವಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

Edited By : Manjunath H D
PublicNext

PublicNext

22/11/2024 10:48 am

Cinque Terre

25.07 K

Cinque Terre

0

ಸಂಬಂಧಿತ ಸುದ್ದಿ