ಚಿತ್ರದುರ್ಗದ ಹೃದಯ ಭಾಗದಲ್ಲಿರುವ ತರಾಸು ರಂಗಮಂದಿರ, ಮೂಲಭೂತ ಸೌಕರ್ಯಗಳಿಂದ ನರಳುತ್ತಿದೆ. ಪ್ರತಿ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮ ನಡೆಸಲು ರಂಗ ಮಂದಿರಕ್ಕೆ ಆಗಮಿಸುವ ಆಯೋಜಕರು ಸೌಲಭ್ಯಗಳಿಲ್ಲದೇ ಪರದಾಡುವಂತ ಸ್ಥಿತಿ ಇದೆ.
ಲಕ್ಷಾಂತರ ಮೌಲ್ಯ ವೆಚ್ಚ ಮಾಡು, ರಂಗಮಂದಿರ ನಿರ್ಮಾಣ ಮಾಡಿದ್ದರೂ ಕೂಡಾ ಸರಿಯಾಗ ವಿದ್ಯುತ್ ಸಂಪರ್ಕ ಹಾಗೂ ಲೈಟಿಂಗ್ಸ್ ವ್ಯವಸ್ಥೆ ಇಲ್ಲ, ಇನ್ನೂ ಸೌಂಡ್ ಸಿಸ್ಟಂ ಕೂಡಾ ಸರಿಯಾಗಿ ಇಲ್ಲದೇ ಇರೋದು ರಂಗಾಸಕ್ತರಿಗೆ ತೀವ್ರತರವಾದ ತೊಂದರೆ ಆಗುತ್ತಿದೆ. ಅಲ್ದೆ ನಾಟಕ ಪ್ರದರ್ಶನಕ್ಕೆ ಆಗಮಿಸುವ ರಂಗ ಕಲಾವಿದರಿಗೂ ಕೂಡಾ ಸರಿಯಾದ ಶೌಚಾಲಯಗಳಿಲ್ಲದೇ, ಪರದಾಡುವಂತ ಸ್ಥಿತಿ ಕೂಡಾ ಇಲ್ಲ ನಿರ್ಮಾಣವಾಗಿದೆ.
ಇನ್ನೂ ರಂಗಮಂದಿರದ ಒಳಭಾಗದಲ್ಲಿ ಆಸನಗಳು ಕೂಡಾ ಮುರಿದು ಹೋಗಿದೆ. ರಂಗಮಂದಿರಕ್ಕೆ ಆನ್ ಲೈನ್ ಬುಕ್ಕಿಂಗ್ ಮಾಡಿಕೊಂಡು ಬರುವ ಆಯೋಜಕರಿಗೆ ಸರಿಯಾದ ಸೌಕರ್ಯಗಳಿಲ್ಲದೇ, ದುಬಾರಿ ವೆಚ್ಚ ಭರಿಸುವಂತ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇನ್ನೂ ಹಲವು ಬಾರಿ ಜನಪ್ರತಿನಿಧಿಗಳಿಗೂ ಈ ಬಗ್ಗೆ ಗಮನಕ್ಕೆ ತಂದಿದ್ರು ಕೂಡಾ ಇದುವರೆಗೂ ಯಾರು ಕೂಡಾ ಗಮನ ಹರಿಸಿಲ್ಲ ಎಂದು ರಂಗಭೂಮಿ ಕಲಾವಿದ KPM ಗಣೇಶಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
22/11/2024 11:24 am