ಹೊಳಲ್ಕೆರೆ: ಪ್ರಕೃತಿ ಸಾಕಷ್ಟು ರಹಸ್ಯಗಳ ದೊಡ್ಡ ತಾಣ. ಬಗೆದಷ್ಟು ಅಪೂರ್ವ ಸಂಗತಿಗಳು ಇಲ್ಲಿ ಕಾಣಸಿಗುತ್ತವೆ. ಇಂತಹ ದೃಶ್ಯಗಳು ನಮ್ಮನ್ನು ಚಕಿತಗೊಳಿಸುತ್ತವೆ. ಇಂತಹ ಸುಂದರ ಪರಿಸರದಲ್ಲಿ ಸಾಕಷ್ಟು ಅಪೂರ್ವ ಅದ್ಭುತಗಳು ಇವೆ. ನಿಸರ್ಗ ನಿರ್ಮಿತ ಇಂತಹ ಅದ್ಭುತಗಳು ನಮ್ಮನ್ನು ಅಚ್ಚರಿಗೊಳಿಸದೆ ಇರಲಾರದು. ಇಲ್ಲಿ ಅಲುಗಾಡುವ ಬಂಡೆಯೊಂದು ಇದ್ದು ಸಾಕಷ್ಟು ವಿಸ್ಮಯಕಾರಿಯಾಗಿದೆ. ಹಾಗಾದರೆ ಆ ಬಂಡೆ ಯಾವುದು? ಎಲ್ಲಿದೆ ಈ ಬಂಡೆ? ಗೋತ್ತೆ? .ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಊರು ಗ್ರಾಮದ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಒಂದು ವಿಸ್ಮಯ ನಡೆಯುತ್ತದೆ. ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟದಲ್ಲಿರುವ ಬಂಡೆಯೊಂದು ಅಲುಗಾಡುತ್ತದೆ. ಈ ಬಂಡೆ ಅಲುಗಾಡುವ ದೃಶ್ಯ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ. ಇದನ್ನು ರಂಗನಾಥ ಸ್ವಾಮಿಯ ಸಂದೇಶ ಎಂದು ಇಲ್ಲಿನ ಜನ ನಂಬುತ್ತಾರೆ.
Kshetra Samachara
23/11/2024 09:57 pm