ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕೋಟೆ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದ ಮಹಿಳೆ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಸಿಬ್ಬಂದಿ

ಚಿತ್ರದುರ್ಗ: ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿ ಕಾಲು ಜಾರಿ ಬಿದ್ದ ಮಹಿಳೆಯನ್ನ ಕೋಟೆಯ ಗಾರ್ಡ್ ಹಾಗೂ ಸಿಬ್ಬಂದಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿತ್ರದುರ್ಗದ ಐತಿಹಾಸಿಕ ಕೋಟೆಯ ಐದನೇ ಬಾಗಿಲು ಬಳಿ ಈ ಘಟನೆ ನಡೆದಿದ್ದು ಬೆಂಗಳೂರಿನಿಂದ ಕೋಟೆ ವೀಕ್ಷಣೆಗೆಂದು ಬಂದಿದ್ದ ಮಹಿಳೆ ಕೋಟೆಯ ಐದನೇ ಬಾಗಿಲು ಬಳಿ ಬಂದಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಆಗ ಸ್ಥಳದಲ್ಲಿದ್ದ ಕೋಟೆಯ ಎಸ್.ಐ.ಎಸ್ ಸೆಕ್ಯೂರಿಟಿ ಗಾರ್ಡ್ ಹಾಗೂ ಸಿಬ್ಬಂದಿ ಮತ್ತು ಪ್ರವಾಸಿ ಮಿತ್ರರು ತಕ್ಷಣ ಮಹಿಳೆಯ ರಕ್ಷಣೆಗೆ ಧಾವಿಸಿ ಅವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

Edited By : Shivu K
PublicNext

PublicNext

23/11/2024 07:26 pm

Cinque Terre

11.9 K

Cinque Terre

0

ಸಂಬಂಧಿತ ಸುದ್ದಿ