ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಪೆಟ್ರೋಲಿಯಂ ಬಂಕ್‌ನಲ್ಲಿ ವಂಚನೆ ಆರೋಪ - ಸಿಬ್ಬಂದಿ, ಗ್ರಾಹಕರು ನಡುವೆ ಮಾತಿನ ಚಕಮಕಿ

ಚಳ್ಳಕೆರೆ: ಬೈಕ್‌ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಸಿಬ್ಬಂದಿ ವಂಚನೆ ಮಾಡುತ್ತಾರೆ ಎಂದು ರೈತರು ಪೆಟ್ರೋಲ್ ಬಂಕ್‌ನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ ನಗರದ ಭಾರತ್ ಪೆಟ್ರೋಲಿಯಂ ಬಂಕ್‌ನಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದಾರೆ. ನೂರು ರೂಪಾಯಿ ಪೆಟ್ರೋಲ್ ಹಾಕಿಸಿದರೆ ಬರೀ 40 ರೂಪಾಯಿ ಪೆಟ್ರೋಲ್ ಮಾತ್ರ ಇಲ್ಲಿ ತುಂಬುತ್ತಾರೆ. ಗ್ರಾಹಕರಿಗೆ ತುಂಬಾ ವಂಚನೆಯಾಗುತ್ತಿದೆ ಎಂದು ಗ್ರಾಹಕರು ಗಂಭೀರ ಆರೋಪ ಮಾಡಿದ್ದಾರೆ.

ಪಾವಗಡ ತಾಲೂಕಿನ ಕೆಂಚ್ಚಮ್ಮನಹಳ್ಳಿ ಗ್ರಾಮದ ಕೃಷ್ಣಪ್ಪ ಎನ್ನುವ ವ್ಯಕ್ತಿ ಚಿತ್ರದುರ್ಗದಿಂದ ಪಾವಗಡಕ್ಕೆ ತೆರಳುವ ಮಧ್ಯದಲ್ಲಿ ಚಳ್ಳಕೆರೆ ಭಾರತ್ ಪೆಟ್ರೋಲಿಯಂ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕಿಗೆ ಬಂದು ನೂರು ರೂಪಾಯಿ ಪೆಟ್ರೋಲ್ ಹಾಕಲು ತಿಳಿಸಿದ್ದು. ಪೆಟ್ರೋಲ್ ಬಂಕಿನ ಸಿಬ್ಬಂದಿ ಬರಿ 60 ರೂಪಾಯಿ ಪೆಟ್ರೋಲ್ ಹಾಕಿದ್ದು ನೂರು ರೂಪಾಯಿ ತೆಗೆದುಕೊಂಡಿದ್ದಾನೆ. ಇದನ್ನು ಗಮನಿಸಿದ ಕೃಷ್ಣಪ್ಪ ಬೈಕ್ ಸವಾರರಿಗೆ ವಂಚನೆ ಮಾಡುತ್ತಿರುವುದನ್ನು ಕಂಡು ಪೆಟ್ರೋಲ್ ಬಂಕಿನ ಸಿಂಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಬಂಕ್ ನ ಮಾಲೀಕ ಸ್ಥಳಕ್ಕೆ ಬರುವವರೆಗೂ ಯಾರಿಗೂ ಪೆಟ್ರೋಲ್ ಹಾಕದಂತೆ ತಾಕಿತು ಮಾಡಿದರು. ಈ ವೇಳೆ ಪೆಟ್ರೋಲ್ ಬಂಕಿನ ಸಿಬ್ಬಂದಿಗು ಹಾಗೂ ರೈತರಿಗೂ ಮಾತಿನ ಚಕಮಕಿ ನಡೆಯಿತು.

Edited By : Nagesh Gaonkar
PublicNext

PublicNext

23/11/2024 07:31 am

Cinque Terre

12.95 K

Cinque Terre

0

ಸಂಬಂಧಿತ ಸುದ್ದಿ