ಸಾಗರ: ನಿಮ್ಮಗೆ ದಮ್ಮಿದ್ರೆ ತಾಕತ್ತಿದ್ದರೆ ಮೋದಿ ಮುಂದೆ ಹೋಗಿ ನಬಾರ್ಡ್‌ನಿಂದ ಬರುವ ಅನುದಾನವನ್ನು ಕಡಿತಗೊಳಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ್ ರಾಜ್ಯದ ಸಂಸದರಿಗೆ ಸಾವಲ್ ಹಾಕಿದ್ದಾರೆ.
ಸೋಮವಾರ ಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ್ , ನಬಾರ್ಡ್ನಿಂದ ಪ್ರತಿವರ್ಷ ಸುಮಾರು 6 ಸಾವಿರ ಕೋಟಿ ರೂ. ಹಣ ಬಿಡುಗಡೆಯಾಗುತಿತ್ತು. ಈಗಿನ ಕೇಂದ್ರ ಸರ್ಕಾರ ಈ ಹಣವನ್ನು ಶೇ. 58ರಷ್ಟು ಕಡಿತಗೊಳಿಸಿದೆ. ಗ್ರಾಮೀಣ ರೈತರ ಶ್ರೇಯೋಭಿವೃದ್ದಿಗೆ ಬಿಡುಗಡೆಯಾಗುತ್ತಿದ್ದ ಈ ಹಣವನ್ನು ಕಡಿತ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ರಾಜ್ಯದ ಸಂಸದರು ಪ್ರಶ್ನೆ ಮಾಡಬೇಕು.
ಶೇ. 4.5 ಬಡ್ಡಿದರದಲ್ಲಿ ನೀಡುತ್ತಿದ್ದ ಸಾಲದ ಹಣ ಏಕಾಏಕಿ ಕಡಿತಗೊಳಿಸಿರುವ ಕಾರಣವೇನು ಎನ್ನುವುದನ್ನು ರಾಜ್ಯದ ಜನರಿಗೆ ಕೇಂದ್ರ ಸ್ಪಷ್ಟಪಡಿಸಬೇಕು. ಇನ್ನು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ರವರ ಮಾತಿನ ಶೈಲಿಯಲ್ಲಿ ಹೇಳುವದಾದರೆ ನಿಮಗೆ ದಮ್ಮಿದ್ರೆ ತಾಕತ್ತಿದ್ರೆ ನಬಾರ್ಡ್ನಿಂದ ಬರುವ ಅನುದಾನವನ್ನು ಕಡಿತಗೊಳಿಸಿದ್ದು ಯಾಕೆ ಎಂದು ಮೋದಿಯ ಮುಂದೆ ಹೋಗಿ ಪ್ರಶ್ನೆ ಮಾಡಿ ಎಂದು ಸವಾಲ್ ಹಾಕಿದ್ದಾರೆ.
PublicNext
25/11/2024 03:02 pm