ಹುಬ್ಬಳ್ಳಿ : ಆಸ್ತಿ ವಿಚಾರಕ್ಕೆ ತಂದೆ ಮಗ ಹೊಡೆದಾಡಿಕೊಂಡ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರೆ, ಮಗ ಹೆಂಡತಿಯನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದಾನೆ. ಹೀಗಾಗಿ ಹೆತ್ತ ತಂದೆಯನ್ನು ಕೊಲೆ ಮಾಡಿದ ಆರೋಪಿಯ ವಿರುದ್ಧ ಆತನ ತಾಯಿಯೇ ಕೊಲೆ ಪ್ರಕರಣ ದಾಖಲು ಮಾಡಿದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು 77 ವರ್ಷದ ನಾಗರಾಜ ಚಂದ್ರಶೇಖರ್ ಎಂಬುವವರ ಮಗ ಅಣ್ಣಪ್ಪನ ಕೈಯಲ್ಲಿ ಕೊಲೆಯಾದ ದುರ್ದೈವಿ ಆಗಿದ್ದಾರೆ. ಕಳೆದ ನವೆಂಬರ್ 19 ರಂದು ಮನೆಯಲ್ಲಿನ ಆಂತರಿಕ ಕಲಹ ಹಾಗೂ ಆಸ್ತಿ ವಿಚಾರಕ್ಕೇ ತಂದೆ ಹಾಗೂ ಮಗನ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಇಬ್ಬರು ನಶೆಯ ಮತ್ತಿನಲ್ಲಿದ್ದ ಕಾರಣ ಅಣ್ಣಪ್ಪ ತಂದೆಯ ಮೇಲೆ ಹಲ್ಲೆ ಮಾಡಿದ ಪರಿಣಾಮ ನಾಗರಾಜ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ.ಇತ್ತ ಮಗ ತನ್ನ ಹೆಂಡತಿಯನ್ನು ಕರೆದುಕೊಂಡು ಊರು ಬಿಟ್ಟಿದ್ದ.
ಆದ್ರೆ ನಾಗರಾಜನಿಗೆ ಮಗ ಹೊಡೆದ ಒಳ ಏಟಿನಿಂದ ರವಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ,ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಮಿಷನರ್ ಎನ್ ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಶವ ಪರಿಶೀಲನೆ ನಡೆಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಿನಲ್ಲಿ ಕುಡಿದ ಮತ್ತಿನಲ್ಲಿ ಹೆತ್ತ ತಂದೆ ಎಂಬುದನ್ನೇ ಮರೆತು ಆಸ್ತಿಯ ವಿಚಾರಕ್ಕೇ ಹಲ್ಲೆ ನಡೆಸಿ ತಂದೆಯ ಕೊಲೆಗೈದ ಮಗ ಇದೀಗ ತಲೆ ಮರೆಸಿಕೊಂಡಿದ್ದು ಹಳೇ ಹುಬ್ಬಳ್ಳಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ನಾಪತ್ತೆಯಾದ ಅಣ್ಣಪ್ಪ ಹಾಗೂ ಆತನ ಹೆಂಡತಿಯ ಪತ್ತೆಗೆ ಜಾಲವನ್ನು ಬಿಸಿದ್ದಾರೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/11/2024 12:41 pm