ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಓಸಿ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸ್ - ನಗದು ವಶ

ಕುಂದಗೋಳ: ಸಾರ್ವಜನಿಕ ಸ್ಥಳದಲ್ಲಿ ಓಸಿ ಅಂಕಿ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಕುಂದಗೋಳ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಬಂಧಿತನಿಂದ 1600 ರೂಪಾಯಿ ನಗದು ಹಣ ವಶಕ್ಕೆ ಪಡೆದಿದ್ದಾರೆ.

ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಬಸ್ ನಿಲ್ದಾಣ ಬಳಿ ಸ್ವಂತ ಲಾಭಕೋಸ್ಕರ ಓಸಿ ಅಂಕಿ ಸಂಖ್ಯೆ ಬರೆಯುತ್ತಿದ್ದ ಅಹಮ್ಮದ್ ಹಜರೇಬಾಬ್ ಮುಲ್ಲಾ ಎಂಬ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 1600 ನಗದು ಹಣ ಹಾಗೂ ಓಸಿ ಅಂಕಿ ಸಂಖ್ಯೆ ಬರೆಯಲು ಬಳಸುತ್ತಿದ್ದ ಪೆನ್ ಕಾಗದ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

25/11/2024 07:28 pm

Cinque Terre

9.45 K

Cinque Terre

0

ಸಂಬಂಧಿತ ಸುದ್ದಿ