ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ವಕ್ಫ್ ವಿರುದ್ಧ ಚಿಕ್ಕೋಡಿಯಲ್ಲಿ ಬೃಹತ್ ಆಂದೋಲನ

ಚಿಕ್ಕೋಡಿ: ರೈತರ, ಮಠ ,ದೇವಸ್ಥಾನ ಮೇಲೆ ವಕ್ಫ್ ಆಸ್ತಿ ವಿರುದ್ಧ ಚಿಕ್ಕೋಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನ ಅಡಿಯಲ್ಲಿ ಬೃಹತ್ ಆಂದೋಲನ ಜರುಗಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆಯವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೈ ತೋರಿಸಿದ್ದಲ್ಲಿ ವಕ್ಫ್ ಆಸ್ತಿ ಕಂಡು ಬರುತ್ತಿದೆ. ಸುಮಾರು 15ರಿಂದ 16 ಸಾವಿರ ರೈತರಿಗೆ ಸೇರಿದ ಜಮೀನಿನ ಮೇಲೆ ವಕ್ಫ್ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಕಳೆದ ಸರ್ಕಾರದಲ್ಲಿ ನಾನು ಮುಜರಾಯಿ ಹಾಗೂ ವಕ್ಪ್ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದೇನೆ.

ಆದರೆ ನನ್ನ ಅಸ್ತಿಗೂ ಇವತ್ತು ವಕ್ಫ್ ಎಂದು ಬರುತ್ತಿದೆ.ಹೀಗೆ ಮುಂದುವರೆದರೆ ಭಾರತೀಯ ಜನತಾ ಪಕ್ಷವು ರಾಜ್ಯ ಕಾಂಗ್ರೆಸ್ ಸರ್ಕಾರ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಮಾತನಾಡಿ ರೈತರ, ದೇವಸ್ಥಾನ ಮಠ,ರೈತರ ಜಮೀನಿನ ಮೇಲೆ ಆಸ್ತಿಗಳ ಮೇಲೆ ವಕ್ಫ್ ಎಂದು ನೋಟಿಸ್ ನೀಡಲಾಗುತ್ತಿದೆ. ಇದು ನಿಜಕ್ಕೂ ಖಂಡನೀಯ. ಈ ವಕ್ಫ್ ವಿರುದ್ಧ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಸಂದರ್ಭದಲ್ಲಿ ಉಗ್ರವಾದ ಪ್ರತಿಭಟನೆಯನ್ನು ಮಾಡಲಾಗುವುದು ಎಂದರು.

ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಅವರು ಮಾತನಾಡಿ ಮಠ ದೇವಸ್ಥಾನದ ಆಸ್ತಿಗಳು ವಕ್ಫ್ ಆಸ್ತಿಗಳಾಗುತ್ತಿವೆ. ಹೀಗೆ ಮುಂದುವರೆದರೆ ಕೆರೆ,ಗುಡ್ಡ, ಗಾವಠಾಣ ಪ್ರದೇಶಗಳು ವಕ್ಫ್ ಆಸ್ತಿ ಆಗುತ್ತದೆ. ಈ ವಕ್ಪ್ ಸಮಸ್ಯೆ ಇತ್ಯರ್ಥ ಆಗುವವರೆಗೂ ಪ್ರತಿಭಟನೆ ಮುಂದುವರೆಯಲಿದೆ.

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಜಗದೀಶ ಕವಟಗಿಮಠ, ನಿಪ್ಪಾಣಿ ನಗರಸಭೆ ಅಧ್ಯಕ್ಷೆ ಸೋನಾಲಿ ಕೋಟಾಡಿಯಾ,ಮಾಜಿ ಎಂಎಲ್ಸಿ ವೀವೆಕರಾವ ಪಾಟೀಲ, ಮಾಜಿ ಶಾಸಕ ಬಾಳಾಸಾಹೇಬ ಪಾಟೀಲ,ಮಹೇಶ ಭಾತೆ,ಅಪ್ಪಾಸಾಹೇಬ ಚೌಗಲಾ,ಸಂಜಯ ಪಾಟೀಲ, ಶಾಂಭವಿ ಅಶ್ವತಪೂರ,ದುಂಡಪ್ಪ ಬೆಂಡವಾಡೆ,ಬಂಡಾ ಘೋರಪಡೆ,ಸಂಜಯ ಕವಟಗಿಮಠ, ನಾಗರಾಜ ಮೇದಾರ,ರಮೇಶ ಕಾಳನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

22/11/2024 02:29 pm

Cinque Terre

16.64 K

Cinque Terre

0

ಸಂಬಂಧಿತ ಸುದ್ದಿ