ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸ್ವಂತ ಬಲದ ಮೇಲೆ ಸರ್ಕಾರ ರಚಿಸಬೇಕು - ಈರಣ್ಣ ಕಡಾಡಿ

ಬೆಳಗಾವಿ; ರಾಜ್ಯದಲ್ಲಿ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಊಹಾಪೋಹದ ಹೇಳಿಕೆಯನ್ನು ಕಾಂಗ್ರೆಸ್ ನವರೇ ಕೊಡ್ತಿದ್ದಾರೆ. ಒಂದು ರೂಪಾಯಿ ಗುದ್ದಲಿ, ಕಟ್ಟಡ ಪೂಜೆ ಮಾಡೋದಕ್ಕೆ ಕಾಂಗ್ರೆಸ್ ಗೆ ಆಗ್ತಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ರವಿ ಗಣಿಗ ಹೇಳಿಕೆ ಕೊಟ್ಟಿದ್ದಾರೆ. ತಕ್ಷಣವೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಅರೆಸ್ಟ್ ಮಾಡಬೇಕು. ಯಾರು ಇವರ ಹಿಂದೆ ಇದ್ದಾರೆ ಅಂತಾ ಅವರ ಮೂಲಕವೇ ಕೇಳಬೇಕು. ಸಾಕ್ಷ್ಯಾಧಾರಗಳು ಇದ್ದರೆ ಬಿಜೆಪಿ, ಕಾಂಗ್ರೆಸ್ ನಾಯಕರು ಯಾರೇ ಆಗಲಿ ತಕ್ಷಣ ಅರೆಸ್ಟ್ ಮಾಡಬೇಕು

ಚುನಾಯಿತ ಸರ್ಕಾರವನ್ನು ಐವತ್ತು ನೂರು ಕೋಟಿ ಕೊಟ್ಟು ಕೆಡವಲು ಎಷ್ಟು ಕಠಿಣ ಇದೆ ಅನ್ನೋದು ಅರ್ಥ ಮಾಡಿಕೊಳ್ಳಲಿ, ಯಾರಿಗೂ ನೂರು ಐವತ್ತು ಕೋಟಿ ಹಣ ಕೊಡುವ ಅಗತ್ಯ ಇಲ್ಲ, ಕಾಂಗ್ರೆಸ್ ನಿಂದ ಬಂದವರನ್ನು ಕಳುಹಿಸಿದವರು ಸಿದ್ದರಾಮಯ್ಯ ಅಂತ ಪ್ರಹ್ಲಾದ ಜೋಶಿ ಹೇಳಿದ್ರು, ಕೇಂದ್ರ ಸಚಿವರು ಹೇಳಿರೋದು ನಿಜವಾಗಿದೆ, ರಾಜ್ಯದ ಜನರಿಗೂ ಗೊತ್ತಾಗಿದೆ. ಬಿಜೆಪಿಗೆ ಬಂದವರು ಈಗಲೂ ನಮ್ಮ ನಾಯಕ ಸಿದ್ದರಾಮಯ್ಯ ಅಂತಾರೆ. ಅವರನ್ನ ಬಿಜೆಪಿಗೆ ನಾನು ಕಳುಹಿಸಿಲ್ಲ ಅಂತಾ ಸಿದ್ದರಾಮಯ್ಯ ಹೇಳಬೇಕಿತ್ತು. ಆದರೆ ಅವರು ಹೇಳಿಲ್ಲ, ಬಿಜೆಪಿಗೆ ಬಂದವರಲ್ಲಿ ಕೆಲವರು ಸಿದ್ದರಾಮಯ್ಯ ನಮ್ಮ ನಾಯಕ ಅಂತಾ ಈಗಲೂ ಬಡಬಡಿಸುತ್ತಿದ್ದಾರೆ. ನಿಮ್ಮ ನಾಯಕ ನಾನಲ್ಲ ಅಂತಾ ಸಿದ್ದರಾಮಯ್ಯ ಹೇಳಿಲ್ಲ. ಹೀಗಾಗಿ ಇಲ್ಲಿ ಏನೋ ಇದೆ ಅಂತಾ ಅನಿಸುತ್ತೆ. ಕಾಂಗ್ರೆಸ್ ನವರು ಇದನ್ನೆಲ್ಲ ಮರೆಮಾಚಲು ಈ ತರಹದ ಹೇಳಿಕೆ‌ ಕೊಡ್ತಿದ್ದಾರೆ. ತಕ್ಷಣ ಅರೆಸ್ಟ್ ಮಾಡಿ ಮಂಪರು ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಹೊರಬರುತ್ತೆ ಎಂದರು.

ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕರನ್ನ ಕಳಿಸಿದ್ರೂ ನಮ್ಮ ಪಕ್ಷದವರು ಸರ್ಕಾರ ಮಾಡಬಾರದು. ಯಾಕೆಂದರೆ ಎಲ್ಲಿಯವರೆಗೆ ನಮ್ಮ ಸ್ವಂತ ಬಲದ ಮೇಲೆ ಬರೋದಿಲ್ಲವೋ ಅಲ್ಲಿಯವರೆಗೆ ಈ ತರಹದ ದೊಂಬರಾಟ ನಡೆಯುತ್ತವೆ. ಈ ದೊಂಬರಾಟ ಸಾಕು, ನಮ್ಮ ಸ್ವಂತ ಬಲದ ಮೇಲೆ ಬಿಜೆಪಿ ಯಾವಾಗ ಅಧಿಕಾರಕ್ಕೆ ಬರುತ್ತೋ ಆಗ ಅಧಿಕಾರ ನಡೆಸೋಣ. ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ, ಅವರು ಆಡಳಿತ ನಡೆಸಲಿ. ಆಡಳಿತ ನಡೆಸೋದಕ್ಕೆ ಆಗಲಿಲ್ಲ ಅಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಬಳಿಕ ಎಲ್ಲರೂ ಸೇರಿ ಚುನಾವಣೆ ಎದುರಿಸೋಣ ಎಂದು ಈರಣ್ಣ ಕಡಾಡಿ ತಿಳಿಸಿದರು.

Edited By : Suman K
PublicNext

PublicNext

22/11/2024 12:28 pm

Cinque Terre

16.24 K

Cinque Terre

0

ಸಂಬಂಧಿತ ಸುದ್ದಿ