ಬೆಂಗಳೂರು: ಅಸಮತೋಲಿತ ಆಸ್ತಿ ಹೊಂದಿದ್ದ ನಾಲ್ವರು ಸರ್ಕಾರಿ ಅಧಿಕಾರಿಗಳ ಖಜಾನೆಯ ವಿವರ ಲೋಕಾಯುಕ್ತ ದಾಳಿ ಬಳಿಕ ಬಟಾಬಯಲಾಗಿದೆ. ಬೆಂಗಳೂರು ನಗರದ 2, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಸೇರಿದಂತೆ ಒಟ್ಟು ನಾಲ್ವರು ಸರ್ಕಾರಿ ಅಧಿಕಾರಿಗಳು, ಅವರಿಗೆ ಸಂಬಂಧಿಸಿದ 22 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಶೋಧದ ಬಳಿಕ ಲಭ್ಯವಾದ ವಿವರ ಇಂತಿದೆ.
ಕೃಷ್ಣವೇಣಿ ಎಂ.ಸಿ, ಹಿರಿಯ ಭೂ ವಿಜ್ಞಾನಿ, ಮಂಗಳೂರು.
ದಾಳಿ ಮಾಡಲಾದ ಸ್ಥಳಗಳು - 5
3 ನಿವೇಶನಗಳು, ಬೆಂಗಳೂರಿನ ಯಲಹಂಕದಲ್ಲಿ 1 ಫ್ಲ್ಯಾಟ್, ನಿರ್ಮಾಣ ಹಂತದಲ್ಲಿರುವ 1 ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು(ಕಾಫಿ ಪ್ಲಾಂಟೇಷನ್) ಸೇರಿದಂತೆ ಒಟ್ಟು ಸ್ಥಿರಾಸ್ತಿ 10.41 ಕೋಟಿ
56 ಸಾವಿರ ನಗದು, 66.71 ಲಕ್ಷ ಮೌಲ್ಯದ ಚಿನ್ನಾಭರಣಗಳು, 60 ಲಕ್ಷ ಬೆಲೆಬಾಳುವ ವಾಹನಗಳು, 24.40 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು,
ಒಟ್ಟು ಆಸ್ತಿಯ ಮೌಲ್ಯ - 11.93 ಕೋಟಿ
ಲೋಕಾಯುಕ್ತ, ಚಿಕ್ಕಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲು.
ಮಹೇಶ್, ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ, ಬೆಂಗಳೂರು
ದಾಳಿ ಮಾಡಲಾದ ಸ್ಥಳಗಳು - 7,
25 ನಿವೇಶನಗಳು, 1 ವಾಸದ ಮನೆ, 25 ಎಕರೆ ಕೃಷಿ ಜಮೀನು ಸೇರಿದಂತೆ 4.76 ಕೋಟಿ ಮೌಲ್ಯದ ಸ್ಥಿರಾಸ್ತಿ 1.82 ಲಕ್ಷ ನಗದು, 15 ಲಕ್ಷ ಮೌಲ್ಯದ ಚಿನ್ನಾಭರಣ, 25 ಲಕ್ಷ ಮೌಲ್ಯದ ವಾಹನಗಳು, ರೂ. 1.71 ಕೋಟಿ ಮೌಲ್ಯದ ಇತರೆ ವಸ್ತುಗಳು
ಒಟ್ಟು ಆಸ್ತಿಯ ಮೌಲ್ಯ - 6.89 ಕೋಟಿ.
ಲೋಕಾಯುಕ್ತ, ಮಂಡ್ಯ ಠಾಣೆಯಲ್ಲಿ ಪ್ರಕರಣ ದಾಖಲು
ಮೋಹನ್.ಕೆ, ಅಬಕಾರಿ ಅಧೀಕ್ಷಕರು, ಅಬಕಾರಿ ಜಂಟಿ ಆಯುಕ್ತರ ಕಛೇರಿ, ಬೆಂಗಳೂರು ದಕ್ಷಿಣ
ದಾಳಿ ಮಾಡಲಾದ ಸ್ಥಳಗಳು - 5.
3 ನಿವೇಶನಗಳು, 2 ವಾಸದ ಮನೆಗಳು, 2-25 ಎಕರೆ ಕೃಷಿ ಜಮೀನು ಸೇರಿದಂತೆ 3.22 ಕೋಟಿ ಮೌಲ್ಯದ ಸ್ಥಿರಾಸ್ತಿ 44.58 ಲಕ್ಷ ಮೌಲ್ಯದ ಚಿನ್ನಾಭರಣ, 35 ಲಕ್ಷ ಮೌಲ್ಯದ ವಾಹನಗಳು, ಬ್ಯಾಂಕ್ ಎಫ್.ಡಿ 35 ಲಕ್ಷ.
ಒಟ್ಟು ಆಸ್ತಿಯ ಮೌಲ್ಯ - 4.37 ಕೋಟಿ
ಲೋಕಾಯುಕ್ತ, ಬೆಂಗಳೂರು ನಗರ ಠಾಣೆಯಲ್ಲಿಪ್ತಕರಣ ದಾಖಲು
ತಿಪ್ಪೇಸ್ವಾಮಿ ಎನ್.ಕೆ, ನಿರ್ದೇಶಕರು, ನಗರ ಯೋಜನೆ, ಬೆಂಗಳೂರು.
ದಾಳಿ ಮಾಡಲಾದ ಸ್ಥಳಗಳು - 5.
1 ನಿವೇಶನ, 2 ವಾಸದ ಮನೆಗಳು, 7-5 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2.50 ಕೋಟಿ ಮೌಲ್ಯದ ಸ್ಥಿರಾಸ್ತಿ
8 ಲಕ್ಷ ನಗದು, 58.73 ಲಕ್ಷ ಮೌಲ್ಯದ ಚಿನ್ನಾಭರಣ, 29.10 ಲಕ್ಷ ಮೌಲ್ಯದ ವಾಹನಗಳು, 15 ಸಾವಿರ ರೂ ಮೌಲ್ಯದ ಇತರೆ ವಸ್ತುಗಳು,
ಒಟ್ಟು ಆಸ್ತಿಯ ಮೌಲ್ಯ - 3.46 ಕೋಟಿ.
ಲೋಕಾಯುಕ್ತ, ಬೆಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/11/2024 10:19 pm