ಬೆಂಗಳೂರು : ಇಂದು ಮುಂಜಾನೆ ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬನಶಂಕರಿಯ ಬೆಂಗಳೂರು ಯೋಜನಾ ಇಲಾಖೆ ನಿರ್ದೇಶಕ ತಿಪ್ಪೇಸ್ವಾಮಿ ಮನೆಯಲ್ಲಿ ರಾಶಿ ರಾಶಿ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.
28 ಕ್ಕೂ ಹೆಚ್ಚು ಜೊತೆ ಓಲೆ ಎಂಟಕ್ಕೂ ಹೆಚ್ಚು ಐಷಾರಾಮಿ ವಾಚ್ ಗಳು, 23 ಕ್ಕೂ ಹೆಚ್ಚು ಚಿನ್ನದ ಸರ, ಮುತ್ತಿನ ಪಂಡೆಂಟ್ ಇರುವ ಸರ ಪತ್ತೆಯಾಗಿದೆ. ಜೊತೆಗೆ ಕೆಜಿ ಗಟ್ಟಲೆ ಬೆಳ್ಳಿ ವಸ್ತುಗಳ ಸುಮಾರು
ಏಳು ಲಕ್ಷ ನಗದು, ಹಾಗೂ ಕೆಲ ಆಸ್ತಿಪತ್ರಗಳು ಪತ್ತೆಯಾಗಿವೆ.
ಇನ್ನೂ ಮೋಹನ್ ಮನೆಯಲ್ಲಿ ಸಿಕ್ಕ ಚಿನ್ನಾಭರಣ ಮೌಲ್ಯಮಾಪನ ಮಾಡಲು ಗಂಟೆಗಳೇ ಬೇಕು ಎನ್ನಲಾಗ್ತಾದೆ. ಅಕ್ಕಸಾಲಿಗರ ಸಮ್ಮುಖದಲ್ಲಿ ಚಿನ್ನಾಭರಣ ಮೌಲ್ಯಮಾಪನ ನಡೆಯುತ್ತಿದೆ.
PublicNext
21/11/2024 12:40 pm