ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ವರದಕ್ಷಿಣೆ ಕಿರುಕುಳ, 7 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 7 ತಿಂಗಳ ತುಂಬು ಗರ್ಭಿಣಿ ನೇಣಿಗೆ ಶರಣಾಗಿದ್ದು, ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡನನ್ನ ಪೊಲೀಸರು ಬಂಧಿಸಿದ್ದಾರೆ

ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿಯಲ್ಲಿ ನಿನ್ನೆ ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ರತ್ನಮ್ಮ (32) ಮೃತ ದುರ್ದೈವಿಯಾಗಿದ್ದಾಳೆ.

ಮೃತ ಮಹಿಳೆ 3 ವರ್ಷದ ಹಿಂದೆ ಗುಮ್ಮನಹಳ್ಳಿ ಗ್ರಾಮದ ಸುರೇಶ್ ಕುಮಾರ್‌ನನ್ನು ಪ್ರೀತಿಸಿ ಮದುವೆಯಾಗಿದ್ದರು, ಪ್ರಾರಂಭದ 3 ತಿಂಗಳು ಇಬ್ಬರ ಸಂಸಾರ ಚೆನ್ನಾಗಿತ್ತು, ಆ ನಂತರ ಗಂಡನ ಮನೆಯವರ ಅಸಲಿ ಮುಖ ಬೆಳಕಿಗೆ ಬಂದಿದೆ, ಪ್ರತಿದಿನ ವರದಕ್ಷಿಣೆ ಹಣ ತರುವಂತೆ ಗಂಡ, ಅತ್ತೆ ಮತ್ತು ಮಾವ ಕಿರುಕುಳ ನೀಡುತ್ತಿದ್ದರು.

ವರದಕ್ಷಿಣೆ ಕಿರುಕುಳ ವಿಚಾರವನ್ನ ರತ್ನಮ್ಮ ತವರು ಮನೆಯವರಿಗೆ ಹೇಳಿದ್ದರು, ಕೂಲಿ ಕೆಲಸ ಮಾಡುತ್ತಿದ್ದ ಅವರು ಹಣ ಹೊಂದಿಸಿ ಕೊಡೂವುದಾಗಿ ಹೇಳಿದ್ದರು. ಆದ್ರೆ ನಿನ್ನೆ ಮಧ್ಯಾಹ್ನ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಮನೆಯವರ ಕಿರುಕುಳದಿಂದ ಬೇಸತ್ತ ಆಕೆ ಸಹೋದರಿನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದಾಳೆ. ಈ ಕುರಿತು ವಾಟ್ಸ್‌ಆ್ಯಪ್‌ನಲ್ಲಿ ಡೆತ್ ನೋಟ್ ಕಳಿಸಿದ್ದಾಳೆ. ಮಧ್ಯಾಹ್ನ 4 ಗಂಟೆ ಸಮಯದಲ್ಲಿ ರತ್ನಮ್ಮ ಅಸ್ವಸ್ಥಗೊಂಡಿರುವ ವಿಷಯ ತಿಳಿಸಿದ್ದು, ದೊಡ್ಡಬಳ್ಳಾಪುರಕ್ಕೆ ಬರುವಷ್ಟರಲ್ಲಿ ಸಾವನ್ನಪ್ಪಿರುವ ವಿಷಯ ಆಕೆಯ ಪೋಷಕರಿಗೆ ಗೊತ್ತಾಗಿದೆ.

ಗಂಡ ಸುರೇಶ್ ಕುಮಾರ್ ಸಾಸಲು ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಕರ್ತವ್ಯ ನಿರ್ವಹಿಸುತ್ತಿದ್ದು, ಆತನನ್ನ ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ. ಇನ್ನು ಸುರೇಶ್ ಕುಮಾರ್ ಮತ್ತು ಆತನ ಪೋಷಕರ ವಿರುದ್ಧ ವರದಕ್ಷಿಣೆ ಕಿರುಕಳ ಪ್ರಕರಣವನ್ನು ದಾಖಲಿಸಲಾಗಿದೆ.

Edited By : Shivu K
PublicNext

PublicNext

21/11/2024 03:07 pm

Cinque Terre

29.89 K

Cinque Terre

0

ಸಂಬಂಧಿತ ಸುದ್ದಿ