ಬೆಂಗಳೂರು: ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಳ ಆಗುತ್ತಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಮತ್ತು RTO ಜಂಟಿಯಾಗಿ ಸೈಕಲ್ ಮ್ಯಾರಥಾನ್ ಆಯೋಜನೆ ಮಾಡಿತ್ತು. ನವೆಂಬರ್ ತಿಂಗಳು ವಾಯು ಮಾಲಿನ್ಯ ತಡೆ ಮಾಸಾಚರಣೆ ಮಾಡಲಾಗುತ್ತದೆ. ಇದೇ ಕಾರಣಕ್ಕೆ ಇಂದು ಎಸಿಪಿ ಲಕ್ಷ್ಮಿ ನಾರಾಯಣ್, ಬೆಂಗಳೂರು ಸೌತ್, ದೀಪಕ್, ಎಲ್ RTO ಸೆಕ್ರೆಟರಿ ಸೈಕಲ್ ಮ್ಯಾರಥಾನ್ಗೆ ಫ್ಲ್ಯಾಗ್ ಆಫ್ ಮಾಡಿದ್ರು. 100 ಸೈಕಲ್ ಅಲ್ಲಿ 10 ಕಿಮೀ ಸೈಕಲ್ ಮ್ಯಾರಥಾನ್ ಮಾಡಿದ್ದು ವಾಯು ಮಾಲಿನ್ಯ ಆಗದ ರೀತಿ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು.
PublicNext
23/11/2024 09:18 pm