ಬೆಂಗಳೂರು: ಚಿಲ್ಲರೆ ವಿಚಾರಕ್ಕೆ ಸಾಮಾನ್ಯವಾಗಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ಮಧ್ಯೆ ಕಿರಿಕ್ ಆಗುತ್ತಾ ಇರುತ್ತದೆ. ಸದ್ಯ ಈ ಕಿರಿಕ್‌ಗೆ KSRTC ಬ್ರೇಕ್ ಹಾಕಲು ಸಜ್ಜಾಗಿದೆ.
KSRTC ಈಗ ಮತ್ತಷ್ಟು ಡಿಜಿಟಲ್ ಮಯವಾಗಿದ್ದು, ಕ್ಯೂ ಆರ್ ಕೋಡ್ ಮೂಲಕ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆ ಮಾಡಿದೆ. ಒಟ್ಟು 8800 ಬಸ್‌ಗಳಲ್ಲಿ UPI ವ್ಯವಸ್ಥೆ ಮಾಡಿದ್ದು, ಪ್ರಾಯೋಗಿಕವಾಗಿ ಆರಂಭ ಮಾಡಿದೆ. ಜೊತೆಗೆ ಎಲ್ಲಾ ಬಸ್ ಸ್ಟೇಷನ್‌ನಲ್ಲಿಯೂ ಈ ಬಗ್ಗೆ ಮಾಹಿತಿ ಕೊಡಲಾಗುತ್ತದೆ. ಬಸ್ ಗಳಲ್ಲಿಯೂ ಅನೌನ್ಸ್ಮೆಂಟ್ ಮಾಡಲಾಗುತ್ತದೆ..
PublicNext
24/11/2024 08:56 am