ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Exclusive: ಇನ್ಮುಂದೆ ಬೀಟ್ ಪೊಲೀಸರ ಲಾಠಿ ಜೊತೆಗೆ ವಿಷಲ್ ಹೊಡಿತಾ ಕುತ್ತಿಗೆಗೆ ಲೈಟ್ ಹಾಕೊಂಡು ಬರ್ತಾರೆ

ಬೆಂಗಳೂರು: ನಮ್ಮ ಏರಿಯಾ ಕಾಯೋ ಪೊಲೀಸರನ್ನು ನಾವು ನಿವೇಲ್ಲ ನೋಡೆ ಇರ್ತಿವಿ. ಹೊಯ್ಸಳ ಸಿಬ್ಬಂದಿ ಬಂದ್ರೆ ವಾಹನದ ಮೇಲೆ ಬರೋ ನೀಲಿ ಕೆಂಪು ಲೈಟ್ ನೋಡಿ ಪೊಲೀಸ್ರು ಬರ್ತಿದ್ದಾರೆ ಅಂತ ಅಂದುಕೊಳ್ತಿದ್ವಿ. ಬೈಕ್‌ನಲ್ಲಿ ಬರೋ ಪೊಲೀಸರು ಬಂದ್ರೆ ಅವ್ರು ಹತ್ರ ಬಂದಾಗ ಗಾಡಿಯಲ್ಲಿ ಲಾಠಿ ಮೈ ಮೇಲೆ ಯೂನಿಫಾರ್ಮ್ ನೋಡೋವರೆಗೂ ಇವರು ಪೊಲೀಸ್ರು ಅಂತ ಗೊತ್ತಾಗ್ತಿರ್ಲಿಲ್ಲ.

ಆದ್ರೆ ಇನ್ಮುಂದೆ ಹಾಗಿಲ್ಲ.. ಇನ್ಮುಂದೆ ಬೀಟ್ ಪೊಲೀಸ್ರು ಬಂದ್ರೆ ಒಂದು ಸಿಗ್ನಲ್ ಇರುತ್ತೆ. ಅದು ವಿಷಲ್ ಸಿಗ್ನಲ್. ನೀವೆಲ್ಲ ಹಳೇ ಸಿನಿಮಾದಲ್ಲೆ ನೋಡಿರ್ತಿರಲ್ಲ ಪೊಲೀಸ್ರು ಒಂದು ಕೈಯಲ್ಲಿ ಲಾಠಿ ಹಿಡಿದು ಇನ್ನೊಂದು ಕೈಯಲ್ಲಿ ವಿಷಲ್ ಹಾಕ್ತ ಗಲ್ಲಿ ಗಲ್ಲಿ ರೌಂಡ ಹಾಕ್ತಿದ್ರು. ಈ ಹಳೇ ಪೊಲೀಸಿಂಗ್ ವ್ಯವಸ್ಥೆಯನ್ನ ಕಮಿಷನರ್ ದಯಾನಂದ್ ಮತ್ತೆ ಜಾರಿಗೆ ತಂದಿದ್ದಾರೆ. ವಿಷಲ್, ಲಾಠಿ ಜೊತೆಗೆ ಪೊಲೀಸರ ಕುತ್ತಿಗೆಗೆ ನೀಲಿ ಮತ್ತು ಕೆಂಪು ಬಣ್ಣದ ಮಿನುಗು ಲೈಟ್ ನ ಕೂಡ ಕೊಟ್ಟಿದ್ದಾರೆ. ಈ ಲೈಟಿಂಗ್ ಎರಡು ರೀತಿ ಸಹಯಾವಾಗಲಿದೆ. ಒಂದು ದೂರದಲ್ಲಿನವರಿಗೆ ಪೊಲೀಸ್ರು ಬರ್ತಿದ್ದಾರೆ ಅನ್ನೋ ಮಾಹಿತಿ ಇನ್ನೊಂದು ವಾಹನ ಸವಾರರಿಗೆ ಯಾರೋ ಇದ್ದಾರೆ ಅನ್ನೋ ಮಾಹಿತಿ. ಜೊತೆಗೆ ವಿಷಲ್ ಹಾಕ್ತ ಪೊಲೀಸ್ರು ರೌಂಡ್ಸ್ ಹಾಕೋದ್ರಿಂದ ಏರಿಯಾದಲ್ಲಿ ಕಾಲಿಡೋ ಕಳ್ಳರು, ಪುಡಿ ರೌಡಿಗಳು ಪೊಲೀಸ್ರು ಬಂದ್ರು ಅನ್ನೋ ಭಯಕ್ಕೆ ಓಡಿ ಹೋಗೋ ಸಾಧ್ಯತೆಯಿದೆ. ಇದೇ ನಿಟ್ಟಿನಲ್ಲಿ ನಗರದಾದ್ಯಂತೆ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದೆ. ಈ ವಿಷಲ್ ಮತ್ತು ಲೈಟಿಂಗ್ ಬೀಟ್‌ನ ಎಕ್ಸ್ ಕ್ಲೂಸಿವ್ ದೃಶ್ಯ ಪಬ್ಲಿಕ್ ನೆಕ್ಸ್ಟ್ ಲಭಿಸಿದೆ.

Edited By : Manjunath H D
PublicNext

PublicNext

24/11/2024 10:39 am

Cinque Terre

24.57 K

Cinque Terre

0