ಬೆಂಗಳೂರು: ಬಿಡಿಎ ಸ್ವತ್ತು ಸ್ವಾಧೀನಕ್ಕೆ ಹೋಗಿದ್ದ ಬಿಡಿಎ ಅಧಿಕಾರಿಗಳ ಕರ್ತವ್ಯಕ್ಕೆ ಬಾಣಸವಾಡಿ ಎಸಿಪಿ ಅಡ್ಡಿಪಡಿಸಿದ್ದು ಸುದ್ದಿಯಾಗಿತ್ತು. ಕಟ್ಟಡ ನೆಲಸಮಕ್ಕೆ ಹೋದ ಅಧಿಕಾರಿಗಳ ಮೇಲೆ ರೋಪ್ ಹಾಕಿ ಎಸಿಪಿ ಉಮಾಶಂಕರ್ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಸದ್ಯ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಬಿಡಿಎ ಅಧಿಕಾರಿಗಳ ಮೇಲೆ ನಿವೇಶನದ ಮಾಲೀಕ ಎಂದು ಹೇಳಿಕೊಂಡಿರೋ ಪ್ರಭಾಕರ್ ರೆಡ್ಡಿ ಬಿಡಿಎ ಅಧಿಕಾರಿಗಳಾದ ವಾಸುದೇವ್, ಸವಿತಾ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ ಅತಿಕ್ರಮ ಪ್ರವೇಶದ ಕೇಸ್ ದಾಖಲಿಸಿದ್ದಾರೆ. ಇನ್ನು ಈ ದೂರಿಗೆ ಪ್ರತಿಯಾಗಿ ಬಿಡಿಎ ಅಧಿಕಾರಿಗಳು ಪ್ರಭಾಕರ್ ರೆಡ್ಡಿ, ಅಭಿಲಾಶ್ ವಿರುದ್ಧ ಬಿಡಿಎ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.
ಎರಡೂ ದೂರುಗಳು ರಾಮಮೂರ್ತಿನಗರ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಬಾಣಸವಾಡಿ ಎಸಿಪಿ ಉಮಾಶಂಕರ್ ಬಿಡಿಎ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿದ ವಿಚಾರವನ್ನು ಬಿಡಿಎ ಆಯುಕ್ತರ ಗಮನಕ್ಕೆ ತಂದಿದ್ದಾರೆ. ನಾಳೆ ಬಿಡಿಎ ಅಧಿಕಾರಿಗಳು ಎಸಿಪಿ ಉಮಾಶಂಕರ್ ಮೇಲೆ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಎಸಿಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸೋ ಸಾಧ್ಯತೆಯಿದೆ.
PublicNext
24/11/2024 03:07 pm