ಬೆಂಗಳೂರು : ನಿನ್ನೆ ಸಂಜೆ ಕಾರ್ಪೋರೇಷನ್ ಸರ್ಕಲ್ ಸಿಗ್ನಲ್ ಬಳಿ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕಠಿಣ ಕ್ರಮದ ಎಚ್ಚರಿಕೆ ನಡುವೆಯೂ ಹಲ್ಲೆ ಯತ್ನ ಪ್ರಕರಣಗಳು ನಿಲ್ಲುತ್ತಿಲ್ಲ, 3 ತಿಂಗಳಲ್ಲಿ 10ನೇ ಪ್ರಕರಣ ಇದಾಗಿದ್ದು, ನಗರದಲ್ಲಿ ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ಹೆಚ್ಚುತ್ತಲೇ ಇದೆ.
ಬೈಕ್ ಸವಾರನಿಗೆ ದಾರಿ ಬಿಡಲಿಲ್ಲ ಎಂದು ಗಲಾಟೆ ಆರಂಭವಾಗುತ್ತೆ. ಬಳಿಕ ಬಿಎಂಟಿಸಿ ಚಾಲಕನಿಗೆ ಹಲ್ಲೆಗೆ ಟೂ ವಿಲ್ಹರ್ ಸವಾರ ಮುಂದಾಗ್ತಾನೆ. ಬಸ್ಸಿನ ಮುಂದೆ ಬೈಕ್ ನಿಲ್ಲಿಸಿ ಗಲಾಟೆ ಮಾಡಿದ್ದು ತಾವರೆಕೆರೆಯಿಂದ ಮೆಜೆಸ್ಟಿಕ್ ಕಡೆ ಹೊರಟಿದ್ದ ಬಸ್ ಅಂತ ತಿಳಿದು ಬಂದಿದೆ. ಬಿಎಂಟಿಸಿ ಬಸ್ ಸಂಖ್ಯೆ KA53F0011 ಆಗಿದೆ.
PublicNext
23/11/2024 04:57 pm