ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಊರಲ್ಲಿನ ಕಸ ಊರ ಹೊರಗೆ "ವಿಷ' ! ಅಧಿಕಾರಿಗಳು ಗಪ್ ಚುಪ್

ಕುಂದಗೋಳ : ಸ್ವಚ್ಛ ಭಾರತ್ ಬಗ್ಗೆ ನಿತ್ಯ ಬೆಳಿಗ್ಗೆ ಆದ್ರೆ ಜಾಗೃತಿ ಮಾಡೋ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಊರಲ್ಲಿರುವ ಕಸವನ್ನೇಲ್ಲಾ ಗೂಡಿಸಿ ಹಾಕಿ ಕಸ ವಿಲೇವಾರಿ ಘಟಕವನ್ನು ರೋಗದ ಖಜಾನೆಯಾಗಿ ಮಾಡಿದ್ದಾರೆ.

ಹೌದು ! ಕುಂದಗೋಳ ಪಟ್ಟಣದ 19 ವಾರ್ಡ್ ಮನೆ ಮನೆ ಕಸ ಸೇರಿದಂತೆ ಮಾರ್ಕೇಟ್ ಬೀದಿ ವಿವಿಧ ವೃತ್ತಗಳಲ್ಲಿ ಕಸ ಸಂಗ್ರಹಿಸಿ ಕಸ ವಿಲೇವಾರಿ ಘಟಕಕ್ಕೆ ಸಾಗಿಸುವ ಅಧಿಕಾರಿಗಳು ವಿಲೇವಾರಿಯನ್ನೇ ಮರೆತು ಬೃಹತ್ ಕಸದ ರಾಶಿಯನ್ನೇ ಸೃಷ್ಟಿಸಿ ಕಸವನ್ನು "ವಿಷ' ಮಾಡುತ್ತಿದ್ದಾರೆ.

ಕುಂದಗೋಳ ಪಟ್ಟಣದಿಂದ ಕಡಪಟ್ಟಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಇರುವ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ರಾಶಿ ರಾಶಿ ಕಸ ವಿಲೇವಾರಿ ಕಾಣದೆ ಬಿದ್ದಿದ್ದು ಈ ಕಸ ಕರಗಿಸುವ ಕೆಲಸ ಪುಲ್ ಸ್ಟಾಪ್ ಆಗಿದೆ.

ಮುಖ್ಯವಾಗಿ ಹಸಿ ಕಸ/ಒಣ ಕಸ ವಿಲೇವಾರಿ ಮಾಯವಾಗಿ ಪ್ಲಾಸ್ಟಿಕ್, ಕಾಗದ, ರಬ್ಬರ್, ಕಬ್ಬಿಣ, ಇಲೆಕ್ಟ್ರಾನಿಕ್ ವಸ್ತು, ಬಟ್ಟೆ ಸೇರಿದಂತೆ ವಿವಿಧ ತ್ಯಾಜ್ಯವನ್ನೂ ಬೇಕಾಬಿಟ್ಟಿ ಸಂಗ್ರಹಿಸಿ ಘಟಕದಲ್ಲಿ ಸ್ಟಾಕ್ ಮಾಡಲಾಗುತ್ತಿದೆ.

ಕಸದ ನಿರ್ವಹಣೆ ಬಂದ್ ಆಗಿದ್ದು ನಿರ್ವಹಣೆ ಘಟಕದ ಬಳಿ ಹದ್ದು, ಕಾಗೆ, ನಾಯಿಗಳದ್ದೇ ಸಾಮ್ರಾಜ್ಯ ಸ್ಥಾಪಿತವಾಗಿ ಅಕ್ಕಪಕ್ಕದ ಕೃಷಿ ಜಮೀನಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಮುಖ್ಯವಾಗಿ ಲಕ್ಷ ಲಕ್ಷ ಹಣ ವ್ಯಯಿಸಿ ಕಟ್ಟಿದ ಕಸ ವಿಲೇವಾರಿ ಘಟಕ, ಯಂತ್ರೋಪಕರಣಗಳು ಟೆಕ್ನಿಕಲ್ ಸಿಬ್ಬಂದಿ ಮತ್ತು ಕಸ ವಿಲೇವಾರಿ ಕೆಲಸಾಗರರೇ ಇಲ್ಲದೆ ಎಲ್ಲೇಡೆ ಗಬ್ಬುನಾತ ಎದ್ದಿವೆ.

ಕಳೆದ ಹಲವಾರು ವರ್ಷದಿಂದಲೇ ಬಯೋ ಮೈನಿಂಗ್ ಕಾರ್ಯ ಸ್ಥಗಿತವಾಗಿ, ಪ್ರತಿ ದಿನ ಪಟ್ಟಣ ಪಂಚಾಯಿತಿ ಡಿಪಿಆರ್ ಪ್ರಕಾರ ಅಂದಾಜು 6.50 ಟನ್ ಪ್ರಮಾಣದಲ್ಲಿ ಹೆಚ್ಚು-ಕಡಿಮೆ ಕಸ ಸಂಗ್ರಹ ಮಾಡೋ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಆಡಳಿತಾಧಿಕಾರಿ ಇತ್ತ ತಲೆ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲಾ !

ಒಟ್ಟಾರೆ ಪ್ರತಿ ದಿನ 3 ಆಟೋ ಟಿಪ್ಪರ್ ಮೂಲಕ ಕುಂದಗೋಳದಲ್ಲಿ ಸಂಗ್ರಹಿಸುವ ಕಸ ವಿಲೇವಾರಿ ಆಗದೆ ಬೇಕಾಬಿಟ್ಟಿ ಬಿದ್ದಿದ್ದು ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ಎಷ್ಟೇಷ್ಟು ಖರ್ಚಾಯ್ತು ? ಇಲ್ಲಿಯವರೆಗೆ ಏನೆಲ್ಲಾ ಕೆಲಸ ಆಗಿದೆ ? ಎಷ್ಟು ಕಸ ನಿರ್ವಹಣೆ ಆಯ್ತು ? ನಿರ್ವಹಣೆ ಆದ ಕಸ ಏನಾಯ್ತು ? ಎಂಬುದನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ಪಷ್ಟತೆ ನೀಡಬೇಕಿದೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Vinayak Patil
Kshetra Samachara

Kshetra Samachara

21/11/2024 04:26 pm

Cinque Terre

35.36 K

Cinque Terre

0

ಸಂಬಂಧಿತ ಸುದ್ದಿ