ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಡ್ರಗ್ಸ್ ಮಾಫಿಯಾ - ಕ್ರಮಕ್ಕೆ ಆಗ್ರಹ

ಮುಲ್ಕಿ : ನಗರ ಪಂಚಾಯತ್ ಮಾಸಿಕ ಸಭೆ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ನಡೆಯಿತು

ಸಭೆಯಲ್ಲಿ ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ ಪಂಚಾಯತ್.ವ್ಯಾಪ್ತಿಯ ಚಿತ್ರಾಪು ಕಟ್ಟೆ ಜಂಕ್ಷನ್ ಬಳಿ ಅಪಾಯಕಾರಿ ಮರಕ್ಕೆ ವಿದ್ಯುತ್ ತಂತಿ ತಾಗಿಕೊಂಡಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತಗಳು ಸಂಭವಿಸುತ್ತಿದೆ ಕೂಡಲೇ ಮರವನ್ನು ತೆರವುಗೊಳಿಸಲು ಮೆಸ್ಕಾಂಗೆ ಮನವಿ ಮಾಡಿದರು.

ಸದಸ್ಯ ಸಂದೀಪ್ ಕುಮಾರ್ ಮಾತನಾಡಿ ಕೆಎಸ್ ರಾವ್ ನಗರದಲ್ಲಿ ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸಲು ಅನೇಕ ಬಾರಿ ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೂ ತೆರವುಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಮೆಸ್ಕಾಂ ಅಧಿಕಾರಿ ಕೃಷ್ಣಪ್ಪ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು .

ನ.ಪಂ. ವ್ಯಾಪ್ತಿಯ ಪಡುಬೈಲು, ಚಿತ್ರಾಪು ಮತ್ತಿತರ ಕಡೆಗಳಲ್ಲಿ ಡ್ರಗ್ಸ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಶಾಲಾ ಮಕ್ಕಳಿಗೆ ಡ್ರಗ್ಸ್ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.

Edited By : PublicNext Desk
Kshetra Samachara

Kshetra Samachara

21/11/2024 04:10 pm

Cinque Terre

376

Cinque Terre

0

ಸಂಬಂಧಿತ ಸುದ್ದಿ