ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸ್ಕೂಟರ್‌ನಲ್ಲಿ ಬಂದು ಹೆಲ್ಮೆಟ್ ಕಳವು? - ವಿಡಿಯೋ ವೈರಲ್

ಮಂಗಳೂರು: ಸ್ಕೂಟರ್‌ನಲ್ಲಿ ಬಂದ ಮೂವರು ಯುವಕರು ಪಾರ್ಕ್ ಮಾಡಲಾಗಿದ್ದ ಬೈಕ್‌ನಿಂದ ಹೆಲ್ಮೆಟ್ ಎಗರಿಸಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ‌. ಈ ಕೃತ್ಯ ನಗರದ ಬಿಜೈ ಪರಿಸರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

KA19ET2157 ನಂಬರ್‌ನ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು ಯುವಕರು ಆಗಮಿಸುತ್ತಾರೆ. ಮೂವರಲ್ಲಿ ಓರ್ವನು ವಾಹನದಿಂದ ಇಳಿದು ಹಿಂದಿರುಗಿ ತೆರಳುತ್ತಾನೆ. ಮತ್ತೋರ್ವನು ಅಲ್ಲಿಯೇ ಪಾರ್ಕ್ ಮಾಡಿದ್ದ ಬೈಕ್‌ನಿಂದ ಹೆಲ್ಮೆಟ್ ತೆಗೆದುಕೊಂಡು ಸ್ಕೂಟರ್ ನಲ್ಲಿ ಕೂರುತ್ತಾನೆ‌. ಸ್ಕೂಟರ್ ಅನ್ನು ಸವಾರ ಯೂಟರ್ನ್ ಹೊಡೆದು ಮರಳಿ ಬಂದ ದಾರಿಯತ್ತ ಚಲಾಯಿಸುತ್ತಾನೆ. ಇಳಿದು ಅನತಿ ದೂರ ಸಾಗಿದವನು ಮತ್ತೆ ಸ್ಕೂಟರ್ ಹತ್ತಿ ತ್ರಿಪ್ಪಲ್ ರೈಡಿಂಗ್‌ನಲ್ಲಿ ಸಂಚರಿಸುತ್ತಾರೆ‌.

ವಿಶೇಷವೆಂದರೆ ಮೂವರೂ ಹೆಲ್ಮೆಟ್ ಧರಿಸಿಲ್ಲ. ಸದ್ಯ ಕಳ್ಳರು ಹೆಲ್ಮೆಟ್ ಎಗರಿಸುತ್ತುದ್ದಾರೆ ಎಂದು ವೀಡಿಯೋ ವೈರಲ್ ಆಗ್ತಿದೆ. ಈ ಬಗ್ಗೆ ಸಂಚಾರಿ ಠಾಣಾ ಪೊಲೀಸರು ಗಮನಹರಿಸಬೇಕಾಗಿದೆ.

Edited By : Nagesh Gaonkar
PublicNext

PublicNext

20/11/2024 08:06 pm

Cinque Terre

83.45 K

Cinque Terre

2

ಸಂಬಂಧಿತ ಸುದ್ದಿ