ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿದ ಕಳ್ಳ- ಪ್ರಕರಣ ದಾಖಲು

ಕಾರ್ಕಳ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೋರ್ವಳ ಕತ್ತಿನಿಂದ ಕಳ್ಳನೋರ್ವ ಚಿನ್ನದ ಸರ ಎಗರಿಸಿದ ಘಟನೆ ನಿನ್ನೆ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತಾವರದಲ್ಲಿ ನಡೆದಿದೆ.

ಕಾಂತಾವರ ನಿವಾಸಿ ಗೋಪಿ (66) ಎಂಬವರು ದೇವಸ್ಥಾನಕ್ಕೆ ಹೋಗಿ ವಾಪಾಸ್ಸು ಬರುವ ವೇಳೆ ಘಟನೆ ನಡೆದಿದ್ದು, ಕಳ್ಳತನವಾದ ಚಿನ್ನದ ಮೌಲ್ಯ ರೂ. 1,20,000 ಎಂದು ಅಂದಾಜಿಸಲಾಗಿದೆ.

ಕಳ್ಳನು ಚಿನ್ನದ ಚೈನನ್ನು ಬಲವಂತವಾಗಿ ಎಳೆದುಕೊಂಡು ಹೋಗುವ ವೇಳೆ ಕೈಗಳಿಂದ ಬಲವಾಗಿ ತಳ್ಳಿದ ಪರಿಣಾಮ ಗೋಪಿಯವರ ಎಡ ಕೈಗೆ, ಕುತ್ತಿಗೆಗೆ, ತೋಳಿಗೆ ನೋವು ಮತ್ತು ಗಾಯವಾಗಿರುತ್ತದೆ ಎಂದು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Edited By : Abhishek Kamoji
Kshetra Samachara

Kshetra Samachara

03/12/2024 02:33 pm

Cinque Terre

946

Cinque Terre

0

ಸಂಬಂಧಿತ ಸುದ್ದಿ