ಮಂಗಳೂರು: ಫೆಂಗಲ್ ಚಂಡಮಾರುತ ಮಂಗಳವಾರ ಮಧ್ಯಾಹ್ನದ ವೇಳೆಗೆ ಮಂಗಳೂರು ದಾಟಿ ಹೋಗಿದ್ದು, ಇನ್ನೇನು ತೊಂದರೆಯಿಲ್ಲ. ಆದರೂ ಇನ್ನೂ ಒಂದು ದಿನ ಯಾರೂ ಬೀಚ್, ನದಿ ಹಾಗೂ ನೀರಿರುವ ಪ್ರದೇಶಗಳಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ.
ಆದರೂ ರೆಸಾರ್ಟ್‌ಗಳಿಗೆ ಹೊರ ಜಿಲ್ಲೆಯವರು ಬಂದು ಉಳಿಯದಂತೆ ನೋಡಿಕೊಳ್ಳಬೇಕು. ಅದರ ಮೇಲೆಯೂ ರೆಸಾರ್ಟ್‌ಗಳಲ್ಲಿ ಉಳಿದು ಏನಾದರೂ ಅನಾಹುತ ಸಂಭವಿಸಿದ್ದಲ್ಲಿ ಆಯಾ ರೆಸಾರ್ಟ್ ಮಾಲಕರನ್ನೇ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಫೆಂಗಲ್ ಚಂಡಮಾರುತದ ಪರಿಣಾಮ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗ್ಗಿನವರೆಗೆ ಮಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಮುಲ್ಕಿ, ಉಳ್ಳಾಲ, ಮಂಗಳೂರು ಸೇರಿದಂತೆ ಬಂಟ್ವಾಳದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ. ಆದರೆ ಪ್ರಾಣಹಾನಿಯಂತಹ ಗಂಭೀರ ದುರಂತ ಸಂಭವಿಸಿಲ್ಲ. ಮಂಗಳೂರಿನ ಕಂಪೌಂಡ್ ಕುಸಿತ, ಏರ್ಪೋರ್ಟ್‌ನಲ್ಲಿ ಭೂಕುಸಿತ, ಮನೆಗೆ ನೀರು ನುಗ್ಗಿದ ಪ್ರಸಂಗಗಳು ನಡೆದಿದೆ. ರಾತ್ರಿಯಿಡೀ ಮನಪಾ, ಸ್ಥಳೀಯಾಡಳಿತ, ಎಸ್‌ಡಿಆರ್‌ಎಫ್ ತಂಡಗಳು ಅಲರ್ಟ್ ಆಗಿದ್ದು, ತೊಂದರೆ ಆದಲ್ಲಿ ಧಾವಿಸಿ ಕಾರ್ಯಾಚರಣೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
PublicNext
03/12/2024 06:03 pm