ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಚಿತ್ರಾಪು ಘಜನಿ, ಕಲ್ಸಂಕ ಹಾಗೂ ಪಡುಬೈಲು ಬಳಿ ಉಪ್ಪು ನೀರು ತಡೆಗೆ ನಿರ್ಮಾಣಗೊಂಡಿರುವ ಅಣೆಕಟ್ಟಿಗೆ ಹಲಗೆ ಹಾಕದೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ ಕಾರಣ ನೂರಾರು ಎಕರೆ ಗದ್ದೆಗೆ ಉಪ್ಪು ನೀರು ನುಗ್ಗಿ ಬೆಳಗಳಿಗೆ ಹಾನಿ ಉಂಟಾಗಿದೆ.
ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ಉಪ್ಪು ನೀರು ತಡೆ ಅಣೆಕಟ್ಟು ಸೋರಿಕೆಯಾಗದಂತೆ ತಡೆಯಲು ಹಾಕಬೇಕಾಗಿದ್ದ ಹಲಗೆಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಗುತ್ತಿಗೆದಾರರು ನಿರ್ಲಕ್ಷ್ಯ ತನ ಎದ್ದು ಕಾಣುತ್ತಿದೆ. ಇದರಿಂದ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಹಲಗೆಗಳನ್ನು ಸುರಕ್ಷಿತವಾಗಿ ಇಡಬೇಕಾಗಿದ್ದ ಸುಸಜ್ಜಿತ ಕಟ್ಟಡ ಅನಾಥವಾಗಿದೆ. ಸಮುದ್ರದಲ್ಲಿ ಏರಿಳಿತ ಉಂಟಾಗಿ ಸಮುದ್ರದಿಂದ ಉಪ್ಪು ನೀರು ತೀರ ಪ್ರದೇಶದ ಒಳಗೆ ನುಗ್ಗಿ ಕೃಷಿ ಹಾನಿ ಸಂಭವಿಸಿದೆ. ಇದಕ್ಕೆ ಗುತ್ತಿಗೆದಾರರೇ ನೇರ ಹೊಣೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಕೆಲ ಕೃಷಿಕರ ಬಾವಿಗೂ ಕೂಡ ಉಪ್ಪು ನೀರು ನುಗ್ಗಿದ್ದು ಕಂಗಲಾಗಿದ್ದಾರೆ.
ಈ ಕುರಿತು ಮಾತನಾಡಿದ ಸ್ಥಳೀಯ ಕೃಷಿಕರು ಕೂಡಲೇ ಸಂಬಂಧಪಟ್ಟ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ
ಪುನೀತ್ ಕೃಷ್ಣ , ಪಬ್ಲಿಕ್ ನೆಕ್ಸ್ಟ್, ಮುಲ್ಕಿ
PublicNext
20/11/2024 06:14 pm