ಉಡುಪಿ : ನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಕೊಪ್ಪಳ ತಾಲೂಕು ಕುಷ್ಟಗಿಯ ಸಿದ್ದಪ್ಪ ಕೆ. ಕೊಡ್ಲಿ ಎಂಬಾತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದು, ಆತನನ್ನು ಮೂರೇ ದಿನದಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮನೆಯ ಹಾಲ್‌ನ ಗಾಜಿನ ಬೀರುವಿನಲ್ಲಿ ಹಾಗೂ ಮಲಗುವ ಕೋಣೆಯಲ್ಲಿ ಇರಿಸಿದ್ದ ಕಪಾಟಿನಲ್ಲಿದ್ದ ಲಾಕರ್‌ನಲ್ಲಿ ಇರಿಸಿದ್ದ ಸುಮಾರು 427 ಗ್ರಾಂ ತೂಕದ 31,17,100 ರೂ. ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ಸಿದ್ದಪ್ಪ ಕಳವು ಮಾಡಿಕೊಂಡು ಹೋಗಿದ್ದ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತ ಕಳವು ಮಾಡಿ ಅಡಗಿಸಿಟ್ಟಿದ್ದ ಸ್ಥಳದಿಂದ 30 ಲಕ್ಷ ರೂ. ಮೌಲ್ಯದ 374.45 ಗ್ರಾಂ ತೂಕದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
Kshetra Samachara
21/11/2024 12:14 pm