ಬ್ರಹ್ಮಾವರ: ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಬ್ರಹ್ಮಾವರ, ಉಡುಪಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬ್ರಹ್ಮಾವರ ವತಿಯಿಂದ ವೈಜ್ಞಾನಿಕ ಪಶು ಸಂಗೋಪನೆ ಕುರಿತು ರೈತರ ಇಲಾಖಾ ತರಬೇತಿ ಬುಧವಾರ ಉನ್ನತಿ ಸಭಾ ಭವನದಲ್ಲಿ ಜರುಗಿತು.
ಈ ಸಂದರ್ಭ ಪಶು ವೈದ್ಯ ಡಾ.ಪ್ರದೀಪ್ ಮಾತನಾಡಿ, ಕರಾವಳಿ ಭಾಗದಲ್ಲಿ ಮಣ್ಣು- ನೀರು ಮತ್ತು ಹವಾಗುಣಕ್ಕೆ ಹೈನುಗಾರಿಕೆಯಲ್ಲಿ ವೈಜ್ಞಾನಿಕತೆ ಅಗತ್ಯವಾಗಿದೆ. ಇಲ್ಲಿ ಹಸುಗಳಿಗೆ ಪಶು ಆಹಾರ ನೀಡಿದರೆ ಮಾತ್ರ ಹಾಲು. ಆದರೆ, ಮಲೆನಾಡುಬಯಲು ಸೀಮೆಯಲ್ಲಿ ಅವುಗಳ ಮೇವಿನಲ್ಲೆ ಎಲ್ಲವೂ ಅಡಗಿರುತ್ತದೆ ಎಂದರು.
ಬ್ರಹ್ಮಾವರ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ,ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಸುಭಾಶ್‌ಚಂದ್ರ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಪ್ರಗತಿಪರ ಹೈನುಗಾರರಾದ ದಿವ್ಯ ಅಲ್ಮೇಡಾ ಉಪಸ್ಥಿತರಿದ್ದರು. ತಾಲೂಕಿನ 60 ಹೈನುಗಾರ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.
Kshetra Samachara
20/11/2024 08:35 pm