ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಜಿಲ್ಲಾಸ್ಪತ್ರೆಗೆ ಡಿ ಸಿ ಶುಭಕಲ್ಯಾಣ್ ದಿಢೀರ್ ಭೇಟಿ - ಪರಿಶೀಲನೆ

ತುಮಕೂರು : ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆ ಹಳೆಯ ಕಟ್ಟಡವಾಗಿರುವುದರಿಂದ ಯಾವುದೇ ರೀತಿಯ ಅಗ್ನಿ ಅವಘಡಗಳಾಗದಂತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಲರ್ ಬೇಗ್ ಅವರಿಗೆ ಸೂಚಿಸಿದರು.

ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಹೆರಿಗೆ ವಾರ್ಡ್, ಡೆಂಘ ರೋಗಿಗಳ ವಾರ್ಡ್, ಟ್ರಯೇಜ್ ಕೊಠಡಿ, ಹೊರ ರೋಗಿ ಚೀಟಿ ವಿಭಾಗಳಿಗೆ ಭೇಟಿ ನೀಡಿದ ಅವರು ವಿದ್ಯುತ್ ಶಾರ್ಟ್ ಸಕ್ಯುರ್ಟ್ ವಿದ್ಯುತ್ ವೈರ್‌ಗಳನ್ನು ಹಾಗಾಗ್ಗೆ ಪರಿಶೀಲಿಸಬೇಕು. ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಹೊಗೆ ತುಂಬಿಕೊಂಡಲ್ಲಿ ಎಚ್ಚರಿಕೆ ನೀಡಲು ಫೈರ್ ಡಿಟೆಕ್ಟರ್ ಅಳವಡಿಸಬೇಕು ಎಂದರು.

ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹಳೆ ಕಟ್ಟಡಗಳಲ್ಲಿ ಪರಿಶೋಧನೆ ಕೈಗೊಂಡು ವರದಿ ನೀಡಬೇಕು ಎಂದು ಸ್ಥಳದಲ್ಲಿದ್ದ ಅಗ್ನಿ ಶಾಮಕ ಅಧಿಕಾರಿಗೆ ಸೂಚಿಸಿದರು.

Edited By : PublicNext Desk
Kshetra Samachara

Kshetra Samachara

17/11/2024 03:48 pm

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ