ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಮಶಾನ ಭೂಮಿ ಒತ್ಯುವರಿ - ಇಬ್ಬರಿಗೆ 1 ವರ್ಷ ಶಿಕ್ಷೆ 10 ಸಾವಿರ ದಂಡ

ತುಮಕೂರು

ತಾಲ್ಲೂಕು ಕೋರ ಹೋಬಳಿ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ ಸ್ಮಶಾನಕ್ಕೆ ಸೇರಿದ 10 ಗುಂಟೆ ಜಾಗ ಒತ್ತುವರಿ ಮಾಡಿಕೊಂಡು ವಸತಿಗೃಹ ನಿರ್ಮಿಸಿದ್ದ ಇಬ್ಬರಿಗೆ 1 ವರ್ಷ ಶಿಕ್ಷೆ, ₹ 10 ಸಾವಿರ ದಂಡ ವಿಧಿಸಿ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಚಿಕ್ಕಗುಂಡಗಲ್ಲು ಗ್ರಾಮದ ಎಸ್‌.ಕುಮಾರಸ್ವಾಮಿ, ಪ್ರವೀಣ್ ಶಿಕ್ಷೆಗೆ ಒಳಗಾದವರು. ರಂಗನಾಥ್,

ಸಿದ್ದಲಿಂಗಮೂರ್ತಿ ಎಂಬುವರು ಸ್ಮಶಾನ ಜಾಗ ಒತ್ತುವರಿ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಜಾಗ ಒತ್ತುವರಿ ಮಾಡಿಕೊಂಡು ವಸತಿಗೃಹ ನಿರ್ಮಿಸಿ, ಹೂವಿನ ಗಿಡಗಳನ್ನು ಬೆಳೆಸಿರುವುದು ವಿಚಾರಣೆ ಸಂದರ್ಭದಲ್ಲಿ ಸಾಬೀತಾಗಿದೆ. ಹಾಗಾಗಿ ಇಬ್ಬರು ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಜಮೀನು ವಶಕ್ಕೆ ಪಡೆಯುವಂತೆ ಆದೇಶದಲ್ಲಿ ತಿಳಿಸಲಾಗಿದೆ

Edited By : PublicNext Desk
Kshetra Samachara

Kshetra Samachara

23/11/2024 08:36 am

Cinque Terre

580

Cinque Terre

0

ಸಂಬಂಧಿತ ಸುದ್ದಿ