ಯುಎಸ್ನ ಸಾಲ್ಟ್ ಲೇಕ್ ಸಿಟಿಯಲ್ಲಿ ಯುವತಿಯೊಬ್ಬಳು ವಿದ್ಯುತ್ ಟ್ರಾನ್ಸ್ಫಾರ್ಮರ್ ಮೇಲೇರಿ ಕುಳಿತು ಹುಚ್ಚಾಟ ನಡೆಸಿದ ಪರಿಣಾಮ ಒಟ್ಟು 800 ಮನೆಗಳು ವಿದ್ಯುತ್ ಕಡಿತದ ಸಮಸ್ಯೆಗಳನ್ನು ಎದುರಿಸಿದೆ.
ಪೊಲೀಸರು ಹೇಳುವ ಪ್ರಕಾರ ಯುವತಿ ಮಾನಸಿಕವಾಗಿ ಸಮಸ್ಯೆಯನ್ನು ಹೊಂದಿದ್ದಾಳೆ. ಅವಳ ತಲೆಯಲ್ಲಿ ಏನು ಬಂತೋ ಗೊತ್ತಿಲ್ಲ. ಏಕಾಏಕಿ ದೈತ್ಯ ವಿದ್ಯುತ್ ಕಂಬ ಏರಿ ಅಲ್ಲಿ ಜೋಡಿಸಲಾಗಿರುವ ದೈತ್ಯ ಸಿಲಿಂಡರ್ಗಳನ್ನು ಹಿಡಿದುಕೊಂಡು ನಿಂತಿದ್ದಾಳೆ. ಬಳಿಕ ಹೈವೊಲ್ಟೇಜ್ ಇರುವ ವಿದ್ಯುತ್ ತಂತಿಗಳ ಮೇಲೆ ಬಳ್ಳಿ ಜೋತು ಬಿದ್ದದಂತೆ ಜೋತು ಬಿದ್ದಿದ್ದಾಳೆ. ಆಕೆಯನ್ನು ಕಾಪಾಡಲು ಹರಸಾಹಸ ಪಡಬೇಕಾಯ್ತು ಎಂದು ಹೇಳಿದ್ದಾರೆ.
ಈ ದೃಶ್ಯವನ್ನು ಕಣ್ಣಾರೆ ಕಂಡ ವ್ಯಕ್ತಿಗಳು ಹೇಳುವ ಪ್ರಕಾರ ಆಕೆ ವಿದ್ಯುತ್ ಕಂಬವನ್ನು ಏರಿ ಈ ಜಗತ್ತು ನನಗೆ ಹಾಗೂ ನನ್ನ ಮಕ್ಕಳಿಗೆ ಸುರಕ್ಷಿತವಲ್ಲ ಎಂದು ಹೇಳುತ್ತಿದ್ದಳಂತೆ. ನಾವು ಆಕೆ ಸುರಕ್ಷಿತವಾಗಿ ಕೆಳಗೆ ಇಳಿಯಲಿ ಎಂದು ಪ್ರಾರ್ಥಿಸುತ್ತಿದ್ದೇವು, ಕೊನೆಗೂ ಸುಖಾಂತ್ಯಗೊಂಡಿದ್ದು ಸಂತಸವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
PublicNext
16/11/2024 05:04 pm