ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಕಿರಿಯ ಸಂಸದೆ ಹನಾ-ರವ್ಹಿತಿ ಕರೇರಿಕಿ ಮೈಪಿ-ಕ್ಲಾರ್ಕ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ, ಅವರು ಸಾಂಪ್ರದಾಯಿಕ 'ಮಾವೋರಿ' ನೃತ್ಯವನ್ನು ಪ್ರದರ್ಶಿಸುವ ಮೂಲಕ ಸಂಸತ್ತಿನ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ್ದಾರೆ.
ಕಳೆದ ವರ್ಷ ಸಂಸತ್ತಿನಲ್ಲಿ ತಮ್ಮ ಮೊದಲ ಭಾಷಣದಲ್ಲಿ ಹಾಕಾ ಪ್ರದರ್ಶಿಸಿ ವೈರಲ್ ಆಗಿದ್ದ, ಕಿರಿಯ ಸಂಸದೆ ಹನಾ , ಇದೀಗ
ಮಾವೋರಿ ನೃತ್ಯ ಮಾಡುವ ಮೂಲಕ ವಿವಾದಾತ್ಮಕ ಮಸೂದೆಯ ಪ್ರತಿಯನ್ನು ಹರಿದು ಹಾಕಿ ಮತ್ತೆ ಗಮನ ಸೆಳೆದಿದ್ದಾರೆ.
ರೋಷಾವೇಷದಿಂದ ಅಬ್ಬರಿಸಿರುವ ಹನಾ-ರವ್ಹಿತಿ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವಿರೋಧ ಪಕ್ಷದ ಸಂಸದೆ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಅವರ ಪ್ರಚೋದನೆಗೆ ಗ್ಯಾಲರಿಯ ಸದಸ್ಯರು ಸೇರಿ ನೃತ್ಯಕ್ಕೆ ಸಾಥ್ ಕೊಟ್ಟು ಪ್ರತಿಭಟನೆ ಮುಂದಾಗಿದ್ದಾರೆ.. ಇದನೆಲ್ಲಾ ವೀಕ್ಷಿಸಿದ ಸ್ಪೀಕರ್ ಗೆರ್ರಿ ಬ್ರೌನ್ಲೀ ಅವರು ಕೆಲಕಾಲ ಅಧಿವೇಶನವನ್ನು ಸ್ಥಗಿತಗೊಳಿಸದರು.
PublicNext
15/11/2024 11:25 am