ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮತ್ತು ಮಾಜಿ ಮಹಿಳಾ ಡಬಲ್ಸ್ ನಂಬರ್ ಒನ್, ಸಾನಿಯಾ ಮಿರ್ಜಾ ಮತ್ತು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ದುಬೈ ಕ್ರೀಡಾ ರಾಯಭಾರಿಗಳಾಗಿ ಆಯ್ಕೆ ಮಾಡಲಾಗಿದೆ.ದುಬೈ ಸ್ಪೋರ್ಟ್ಸ್ ಕೌನ್ಸಿಲ್ ಆಯೋಜಿಸಿದ್ದ ಫ್ಯೂಚರಿಸ್ಟಿಕ್ ಮ್ಯೂಸಿಯಂ ಆಫ್ ದಿ ಫ್ಯೂಚರ್ನಲ್ಲಿ ಸೋಮವಾರ ನಡೆದ “ದುಬೈ ಸ್ಪೋರ್ಟ್ಸ್ ರಿಟ್ರೀಟ್” ನಲ್ಲಿ ಈ ಘೋಷಣೆ ಮಾಡಲಾಗಿದೆ.ದುಬೈನ ಕ್ರೀಡಾ ಖ್ಯಾತಿಯನ್ನು ಮತ್ತಷ್ಟು ಬಲಪಡಿಸುವುದು,ನಗರದಾದ್ಯಂತ ಸಕ್ರಿಯ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಗುರಿಯನ್ನು ದುಬೈ ಹೊಂದಿದ್ದ ಆ ಜವಾಬ್ಧಾರಿ ಇವರಿಬ್ಬರ ಹೆಗಲಿಗೇರಿದೆ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ದುಬೈ ನಲ್ಲಿ ಕ್ರೀಡೆಯನ್ನು ಮುನ್ನಡೆಸುವ ಹಾಗೂ ಪೋಷಿಸುವ ಬದ್ಧತೆಯನ್ನು ಅಲ್ಲಿನ ಸರಕಾರ ಹೊಂದಿದೆ ಎಂದಿದ್ದಾರೆ.
PublicNext
15/11/2024 08:01 pm