ಹೆಲೋ, ನಾನು ಮುಂಬೈ ಸೈಬರ್ ಕ್ರೈಂ ಬ್ರಾಂಚ್ ಇಂದ ಕಾಲ್ ಮಾಡ್ತಾ ಇದ್ದೀನಿ ನಿಮ್ಮ ಹೆಸರಲ್ಲಿ ಡ್ರಗ್ಸ್ ಬಂದಿದೆ,ಕಂಪ್ಲೇಟ್ಸ್ ಬಂದಿದೆ ಎಂದು ಹೆದರಿಸಿ ಹಣ ವಸೂಲಿ ಮಾಡುವ ದಂಧೆಗೆ ಬಲಿಯಾದವರು ಹಲವಾರು. ಆದರೆ ಈ ಬಾರಿ ಆ ವಂಚಕನ ಗ್ರಹಚಾರ ಕೆಟ್ಟಿತ್ತು ನೋಡಿ, ಪೊಲೀಸ್ ಅಧಿಕಾರಿಯಂತೆ ಯುನಿಫಾಂ ಹಾಕಿಕೊಂಡು ಆತ ಕಾಲ್ ಮಾಡಿದ್ದು ಯಾರಿಗೆ ಗೊತ್ತಾ ತ್ರಿಶೂರ್ ಸೈಬರ್ ಪೊಲೀಸರಿಗೆ.ಕಾಲ್ ಮಾಡಿ ಹಣ ಪೀಕೋದಿಕ್ಕೆ ಪ್ಲ್ಯಾನ್ ಮಾಡಿದ್ದ ಈತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.ಅಬ್ಬಬ್ಬಾ ಆತನ ಗತ್ತು ನೋಡಬೇಕು, ಥೇಟ್ ಪೊಲೀಸ್ ಅಧಿಕಾರಿಯಂತೆ ಮಾತಾಡುವ ಟೋನ್ ಕೇಳಿದ್ರೆ ನಂಬಲೇ ಬೇಕು.ತ್ರಿಶೂರ್ ಸಿಟಿ ಪೊಲೀಸರು ಈ ಖದೀಮನ ವೀಡಿಯೋ ಶೇರ್ ಮಾಡಿದ್ದು ವೈರಲ್ ಆಗಿದೆ.ಪೊಲೀಸ್ ಮಾತಿನ ಎನ್ ಕೌಂಟರ್ ನೋಡುಗರಿಗೆ ನಗು ತರಿಸಿತು.ಸೈಬರ್ ವಂಚನೆಗೆ ಒಳಗಾಗುವವರಿಗೆ ಎಚ್ಚರಿಕೆ ಕೊಡುವ ಜೊತೆಗೆ ಅವಶ್ಯಕತೆ ಇದ್ದಲ್ಲಿ ಹೆಲ್ಪ ಲೈನ್ ನಂಬರ್ 1930 ಗೆ ಕರೆ ಮಾಡುವಂತೆ ಪೊಲೀಸರು ತಿಳಿಸಿದ್ದಾರೆ.
PublicNext
15/11/2024 08:22 pm