ಸಲೂನ್ ಅಂಗಡಿಯಲ್ಲಿ ತಲೆಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕನೊಬ್ಬ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು . ಸದ್ಯ ವೈರಲ್ ಆದ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೋದಿಸಿದಾಗ ಇದರಲ್ಲಿ ಯಾವುದೂ ನಿಜವಿಲ್ಲ, ಇದೊಂದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂಬುದು ಕಂಡುಬಂದಿದೆ.
ಸಲೂನ್ ಅಂಗಡಿಗೆ ಹೋದಾಗ ಕುತ್ತಿಗೆಯನ್ನು ತಿರುಗಿಸಿ ನೆಟಿಗೆ ತೆಗೆಯುವುದರಿಂದ ನರಗಳಿಗೆ ಹಾನಿಯಾಗುತ್ತದೆ ಮತ್ತು ತಲೆನೋವು ಉಂಟಾಗುತ್ತದೆ. ಕೆಲ ಸಂದರ್ಭಗಳಲ್ಲಿ, ಕೆಲವರು ಪಾರ್ಶ್ವವಾಯುಗೆ ತುತ್ತಾಗಬಹುದು. ಅಂತಹ ಘಟನೆಗಳನ್ನು “ಸಲೂನ್ ಸ್ಟ್ರೋಕ್” ಅಥವಾ “ಬ್ಯೂಟಿ ಪಾರ್ಲರ್ ಸ್ಟ್ರೋಕ್” ಎಂದು ಹೇಳುತ್ತಾರೆ. ಹಠಾತ್ ಮತ್ತು ಬಲವಂತದ ಕತ್ತಿನ ಚಲನೆಯು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಮಿದುಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಅನೇಕ ತಜ್ಞರು ಸೂಚಿಸಿದ್ದಾರೆ.
ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೋದಿಸಿದಾಗ ಇದೊಂದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂಬುದು ಕಂಡು ಬಂದಿದೆ. ಜನರಲ್ಲಿ ಜಾಗೃತಿ ಮೂಡಿಸಲು ಈ ವಿಡಿಯೋ ಮಾಡಲಾಗಿದೆಯಂತೆ. ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಈ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮಾಡಿರುವ ವಿಡಿಯೋವನ್ನು ಅಸಲಿ ಎಂದು ಪರಿಗಣಿಸಿ ಅನೇಕರು ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
PublicNext
16/11/2024 04:35 pm