ಅನುಷ್ಕಾ ಮತ್ತು ವಿರಾಟ್ ಸದಾ ಕೈ ಕೈ ಹಿಡಿದುಕೊಂಡು ಓಡಾಡುವ ಈ ದಂಪತಿ ಎಲ್ಲರ ಫೇವರೇಟ್. ವಾಮಿಕಾ ಮತ್ತು ಅಕಾಯ್ ಎಂಬ ಇಬ್ಬರು ಮಕ್ಕಳೊಂದಿಗೆ ಲಂಡನ್ ನಲ್ಲೇ ಸೆಟಲ್ ಆಗಿದ್ದ ಇವರಿಬ್ಬರ ಮದುವೆಯಾಗಿದ್ದು ಇಟಲಿಯಲ್ಲಿ 2017 ಡಿಸೆಂಬರ್ ನಲ್ಲಿ.ವಿಭಿನ್ನ ವೃತ್ತಿಪರ ಪ್ರಪಂಚಗಳಿಂದ ಬಂದತಹ ಇವರು ಮದುವೆಯ ಮೊದಲ ಆರು ತಿಂಗಳು ಒಟ್ಟಿಗೆ ಸಂಸಾರ ನಡೆಸಲು ಸಾಧ್ಯವಾಗಲಿಲ್ಲವಂತೆ ಅಷ್ಟು ದಿನಗಳಲ್ಲಿ ಕೇವಲ 21 ದಿನಗಳ ಕಾಲ ಇವರಿಬ್ಬರು ಒಟ್ಟಿಗೆ ಸಮಯ ಕಳೆದಿದ್ದರು ಎಂದು ಅನುಷ್ಕಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ನಾನು ವಿರಾಟ್ ಭೇಟಿ ಮಾಡೋದು ಅಥವಾ ವಿರಾಟ್ ನನ್ನನ್ನು ಭೇಟಿ ಮಾಡುವುದನ್ನು ಜನ ವೆಕೇಷನ್ ಎಂದು ಸುದ್ದಿ ಮಾಡುತ್ತಿದ್ದರು ಆದರೆ ಅದು ವೆಕೇಷನ್ ಅಲ್ಲ ತುಂಬಾ ದಿನಗಳ ನಂತರ ನಾವಿಬ್ಬರು ಒಟ್ಟಿಗೆ ಕೂತು ಊಟ ಮಾಡುವ ದಿನವಾಗಿತ್ತು ಎಂದಿದ್ದಾರೆ.
2020 ರಲ್ಲಿ ಲಾಕ್ಡೌನ್ ದಂಪತಿ ಒಟ್ಟಿಗೆ ಕ್ವಾಲಿಟಿ ಸಮಯ ಕಳೆದಿದ್ದು ಬೋರ್ಡ್ ಆಟದಿಂದ ಹಿಡಿದು ಗಿಬ್ಬರಿಶ್ ಚಾಲೆಂಜ್ ವರೆಗಿನ ಎಲ್ಲಾ ಪ್ರತಿದಿನದ ಎಲ್ಲಾ ಚಟುವಟಿಕೆಗಳನ್ನು ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಳ್ಳುತ್ತಿದ್ದರು.
PublicNext
16/11/2024 12:33 pm