ಮುದ್ದು ಮುದ್ದಾದ ಮಾತು,ಕ್ಯೂಟ್ ಎಕ್ಸ್ ಪ್ರೆಶನ್ ಮೂಲಕ 90ರ ದಶಕದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮನಸ್ಸು ಗೆದ್ದಂತಹ ಬಾಲ ಕಲಾವಿದೆ ಬೇಬಿ ಶಾಮಿಲಿ. ಆ ಕಾಲದಲ್ಲಿ ಅಷ್ಟೊಂದು ಸಿನಿಮಾ ಮಾಡುತ್ತಿದ್ದ ನಟಿ ಈಗ ಎಲ್ಲಿದ್ದಾಳೆ,ಏನು ಮಾಡ್ತಿದ್ದಾಳೆ ಅನ್ನೋದು ಎಲ್ಲರ ಪ್ರಶ್ನೆ. ಬೇಬಿ ಶಾಮಿಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದರು. ಸಿದ್ಧಾರ್ಥ್ ಅಭಿನಯದ ಓಯ್ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಈಕೆಗೆ ಅದ್ಯಾಕೋ ಹಿರಿತೆರೆ ಅಷ್ಟೊಂದು ಕೈ ಹಿಡಿಯಲಿಲ್ಲ.
ಮೂರನೇ ವಯಸ್ಸಿನಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಈಕೆಗೆ ಈಗ 37 ವರ್ಷ.ಸದ್ಯ ಈಕೆ ಅಮೇರಿಕಾದಲ್ಲಿ ನೆಲೆಸಿದ್ದಾರೆ, ನೃತ್ಯಗಾರ್ತಿಯಾಗಿರುವುದರಿಂದ ಅಮೇರಿಕದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಈಕೆ ಒಳ್ಳೆಯ ಚಿತ್ರಗಾರ್ತಿ ಕೂಡ ಹೌದು, ತಾನು ಮಾಡಿದ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲಿರುತ್ತಾರೆ. 2018 ರಲ್ಲಿ ತೆಲುಗು ಸಿನಿಮಾ ಒಂದರಲ್ಲಿ ನಟಿಸಿ ಆ ಸಿನಿಮಾ ಸಹ ಫ್ಲಾಪ್ ಆಯಿತು. ಆ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ಬೇಬಿ ಶಾಮಿಲಿ ನಟಿಸಿಲ್ಲ.ಸಿನಿಮಾ ರಂಗದಿಂದ ಇವರೂ ದೂರ ಉಳಿದಿದ್ದರು ಇನ್ಸ್ಟಾ ಗ್ರಾಂ ಪ್ರೊಫೈಲ್ ನಲ್ಲಿ ಆಕ್ಟರ್ ಎಂದು ಹಾಕಿಕೊಂಡಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಕನ್ನಡ ಸಿನಿಮಾ ʼಮತ್ತೆ ಹಾಡಿತು ಕೋಗಿಲೆ' ಮೂಲಕ ಕನ್ನಡ ಇಂಡಸ್ಟ್ರಿಯಲ್ಲಿ ಬಾಲ ನಟಿಯಾಗಿ ಪಯಣ ಆರಂಭಿಸಿದ ಈಕೆ,ಈಗ ಮರೆಯಾಗಿರುವುದು ಚಿತ್ರರಂಗಕ್ಕೆ ಬಹುದೊಡ್ಡ ಲಾಸ್ ಆಗಿದೆ.
PublicNext
16/11/2024 07:05 pm