ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಬಾದ್‌ ನಲ್ಲಿ ದಿಲ್ಜಿತ್ ದೋಸಾಂಜ್ ಕಾನ್‌ಸರ್ಟ್, ಆಲ್ಕೋಹಾಲ್, ಡ್ರಗ್ಸ್ ಕುರಿತು ಹಾಡು ಹೇಳದಂತೆ ತೆಲಂಗಾಣ ಸರಕಾರ ನೋಟೀಸ್

ನವೆಂಬರ್ 15, 2024 ಅಂದರೆ ಇಂದು ಹೈದರಾಬಾದ್‌ನಲ್ಲಿ ದಿಲ್ಜಿತ್ ದೋಸಾಂಜ್ ದಿಲ್-ಲುಮಿನಾಟಿ ಕಾನ್‌ ಸರ್ಟ್‌ ಆಯೋಜನೆ ಮಾಡಲಾಗಿದ್ದು,ಆಯೋಜಕರಿಗೆ ತೆಲಂಗಾಣ ಸರಕಾರ ನೋಟೀಸ್‌ ನೀಡಿದೆ.ಕಾರ್ಯಕ್ರಮದಲ್ಲಿ ಆಲ್ಕೋಹಾಲ್, ಡ್ರಗ್ಸ್ ಅಥವಾ ಹಿಂಸಾಚಾರವನ್ನು ಉತ್ತೇಜಿಸುವ ಯಾವುದೇ ಹಾಡುಗಳನ್ನು ಹಾಡುವಂತಿಲ್ಲ ಎಂದು ನೋಟೀಸ್‌ ನಲ್ಲಿ ನಮೂದಿಸಲಾಗಿದೆ.ಚಂಡೀಗಢದ ಪಂಡಿತರಾವ್ ಧರೇನವರ್ ಅವರು ನೀಡಿದ ಹಳೆಯ ಸಂಗೀತ ಕಛೇರಿಯ ಪುರಾವೆಗಳ ಮೇಲೆ ಈ ನಿರ್ಧಾರವನ್ನು ತೆಲಂಗಾಣ ಸರಕಾರ ಮಾಡಿದೆ.

ಈ ಹಿಂದೆ ಕೂಡ ಹೊಸ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣ ಮತ್ತು ಜೈಪುರದಲ್ಲಿ ಇತ್ತೀಚಿನ ದಿಲ್-ಲುಮಿನಾಟಿ ಸಂಗೀತ ಕಚೇರಿಗಳು ಸೇರಿದಂತೆ ಅಂತರಾಷ್ಟ್ರೀಯ ವೇದಿಕೆಗಳಲ್ಲೂ ದೋಸಾಂಜ್ ಇಂತಹ ಹಾಡುಗಳನ್ನು ಹಾಡಿದ್ದು ಅದರ ವೀಡಿಯೋ ತುಣುಕನ್ನು ನೋಡಿ ಇಂತಹ ನಿರ್ಧಾರಕ್ಕೆ ಅಲ್ಲಿನ ಸರಕಾರ ಬಂದಿದೆ.

ಕಾರ್ಯಕ್ರಮದ ಆಯೋಜಕರು ಮತ್ತು ಗಾಯಕರು ಲೈವ್ ಶೋನಲ್ಲಿ ಮಕ್ಕಳನ್ನು ವೇದಿಕೆಯಲ್ಲಿ ಬಳಸಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.WHO ಪ್ರಕಾರ, 13 ವರ್ಷದೊಳಗಿನ ಮಕ್ಕಳು 120 db ಗಿಂತ ಹೆಚ್ಚಿನ ಧ್ವನಿ ವರ್ಧಕಗಳಿಗೆ ಒಡ್ಡಿಕೊಳ್ಳಬಾರದು ಈ ಹಿನ್ನಲೆಯಲ್ಲಿ ನೋಟೀಸ್‌ ನಲ್ಲಿ ಇದನ್ನೂ ಸ್ಪಷ್ಟ ಪಡಿಸಲಾಗಿದೆ.

Edited By : Suman K
PublicNext

PublicNext

16/11/2024 12:15 pm

Cinque Terre

15.37 K

Cinque Terre

0

ಸಂಬಂಧಿತ ಸುದ್ದಿ