ಭೋಪಾಲ್: ಪರಸ್ತ್ರೀ ಜೊತೆ ಪತಿ ಕಾರ್ನಲ್ಲಿ ಹೊರಟಿದ್ದನ್ನು ಗಮನಿಸಿದ ಪತ್ನಿ ಕೆಂಡಾಮಂಡಲಳಾಗಿ ಹಾದಿ ಬೀದಿ ರಂಪ ಮಾಡಿದ್ದಾಳೆ. ಗಂಡನ ಪ್ರೇಯಸಿಯನ್ನು ಕಾರ್ನಿಂದ ಹೊರಗೆ ಎಳೆದು ಥಳಿಸಿದ್ದಾಳೆ. ಮಧ್ಯಪ್ರದೇಶದ ಈ ಒಂದು ಘಟನೆ ಮಧ್ಯಪ್ರದೇಶದ ನಿಮುಚ್ ಜಿಲ್ಲೆಯ ಸವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಮೀಪದ ಗ್ರಾಮವೊಂದರ ಪಂಚಾಯಿತಿ ಅಧ್ಯಕ್ಷ ಜಿತೇಂದರ್ ಎಂಬಾತ ತನ್ನ ಪ್ರೇಯಸಿಯೊಂದಿಗೆ ಕಾರ್ನಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದಾನೆ. ಈ ವಿಷಯ ಗೊತ್ತಾಗಿ ತನ್ನ ಕುಟುಂಬ ಸಮೇತ ಅಲ್ಲಿಗೆ ಬಂದ ಜಿತೇಂದರ್ನ ಪತ್ನಿ ತನ್ನ ಪತಿಯ ಪ್ರೇಯಸಿಯನ್ನು ಕಾರ್ನಿಂದ ಆಚೆ ಎಳದು ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಸುತ್ತಲೂ ಇದ್ದ ಜನ ಮೂಕ ಪ್ರೇಕ್ಷಕರಂತೆ ಇದನ್ನೆಲ್ಲ ನೋಡುತ್ತ ನಿಂತಿದ್ದಾರೆ. ಈ ಘಟನೆ ನಂತರ ಸರಪಂಚ್ ಜಿತೇಂದರ್ನ ಪ್ರೇಯಸಿ ತನ್ನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಮಹಿಳೆ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ.
PublicNext
16/11/2024 04:42 pm