ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಧಾರ್‌ ನಂ. ಮಿಸ್‌ ಯೂಸ್‌ ಆಗುತ್ತೆ ಅನ್ನುವ ಭಯವೇ, ಆರ್ಥಿಕ ಹಾಗೂ ಕಾನೂನು ತೊಡಕಿನಿಂದ ಬಚಾವ್‌ ಆಗಲು ಇಲ್ಲಿದೆ ಸಲಹೆ

ಆಧಾರ್‌ ಕಾರ್ಡ್‌ ಭಾರತೀಯರ ಮೊದಲ ಐಡೆಂಟಿಟಿ.ಈ 12-ಅಂಕಿಯನ್ನು ಬ್ಯಾಂಕ್‌,ಫೋನ್‌ ಅಥವಾ ಸರಕಾರದ ಯಾವುದೇ ಸೌಕರ್ಯ ಸಿಗಬೇಕಾದರೂ ಆಧಾರ್‌ ಕಾರ್ಡ್‌ ನಂಬರ್‌ ಕೊಡಲೇ ಬೇಕು.ಆದರೆ ಕೆಲವೊಂದಿಷ್ಟು ದುಷ್ಟರು ಆಧಾರ್‌ ನಂಬರ್‌ ದುರ್ಬಳಕೆ ಮಾಡಿ ಆರ್ಥಿಕ ವಂಚನೆ, ಕಾನೂನು ತೊಡಕುಗಳಿಗೆ ಒಳಗಾಗಿರುವ ಪ್ರಕರಣ ವರದಿಯಾಗಿದೆ. ನಿಮ್ಮ ಆಧಾರ್‌ ಕಾರ್ಡ್‌ ದುರ್ಬಳಕೆಯಾಗುತ್ತಿದೆಯಾ ಎಂದು ಹೇಗೆ ಕಂಡು ಹಿಡಿಯಬಹುದು ಗೊತ್ತಾ? ನೇರವಾಗಿ ಪರಿಶೀಲಿಸಲು ಆಗದಿದ್ದರು ಪ್ರಯಾಣ, ತಂಗುವಿಕೆ, ಬ್ಯಾಂಕಿಂಗ್ ಮತ್ತು ಇತರ ಉದ್ದೇಶಗಳಿಗಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಿಂದೆ ಎಲ್ಲಿ ಬಳಸಲಾಗಿದೆ ಎಂಬುದನ್ನು ನೀವು ಪರಿಶೀಲಿಸಬಹುದು.ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಬಳಕೆದಾರರಿಗೆ ತಮ್ಮ ಆಧಾರ್ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸುರಕ್ಷಿತಗೊಳಿಸಲು ಸಹಾಯ ಮಾಡುವ ಸಾಧನಗಳನ್ನು ಪರಿಚಯಿಸಿದೆ.ಅವು ಹೀಗಿವೆ

೧. ಮೈ ಆಧಾರ್‌ ಪೋರ್ಟಲ್‌ ಗೆ ಹೋಗಿ

೨.ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು "ಒಟಿಪಿಯೊಂದಿಗೆ ಲಾಗಿನ್ ಮಾಡಿ" ಕ್ಲಿಕ್ ಮಾಡಿ.

೩.ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ನಿಮ್ಮ ಖಾತೆಯನ್ನು ಪ್ರವೇಶಿಸಲು ಅದನ್ನು ನಮೂದಿಸಿ.

೪.Authentication History( ದೃಢೀಕರಣ ಇತಿಹಾಸ) ಆಯ್ಕೆ ಮಾಡಿ ಯಾವ ದಿನಾಂಕದಿಂದ ಪರಿಶೀಲಿಸಬೇಕೆಂದು ನಮೂದಿಸಿ

೫.ಲಾಗ್‌ ಇನ್‌ ಚೆಕ್‌ ಮಾಡಿ ನೀವು ಮಾಡಿದ್ದಲ್ಲದೇ ಬೇರೆ ಯಾವುದಾದರೂ ಅನಧಿಕೃತ ಚಟುವಟಿಕೆಗೆ ನಿಮ್ಮ ಆಧಾರ್‌ ನಂಬರ್‌ ಬಳಕೆಯಾಗಿದ್ದಲ್ಲಿ ತಕ್ಷಣವೇ ಅದನ್ನು UIDAI ಗೆ ವರದಿ ಮಾಡಿ,ಟೋಲ್‌ ಫ್ರೀ ನಂ 1947 ಕೆ ಕೆರೆಮಾಡಿ

೬.ಆಧಾರ್‌ ಗೆ ಲಾಕ್ ಮತ್ತು ಅನ್ಲಾಕ್ ಮಾಡಲು ಬಯೋಮೆಟ್ರಿಕ್ಸ್ ಅನ್ನು ಅಪ್‌ ಲೋಡ್‌ ಮಾಡಿ,ಬಯೋಮೆಟ್ರಿಕ್‌ ಅನ್ನು ಸುರಕ್ಷಿತಗೊಳಿಸಿ.

Edited By : Suman K
PublicNext

PublicNext

16/11/2024 06:43 pm

Cinque Terre

14.84 K

Cinque Terre

1

ಸಂಬಂಧಿತ ಸುದ್ದಿ