ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಕೊಲೆ ಪ್ರಕರಣದ ಮೂರನೇ ಆರೋಪಿಗೆ‌ ಷರತ್ತು ಬದ್ಧ ಜಾಮೀನು ಮಂಜೂರು

ಕೊಡಗು: ದಿನಾಂಕ 8.10.24 ರಂದು ಸುಂಟಿಕೊಪ್ಪ ಸಮೀಪ ಕಾಫಿ ತೋಟದಲ್ಲಿ ಪುರುಷನ ಸುಟ್ಟ ಶವ ಪತ್ತೆಯಾಗಿ ಪ್ರಕರಣ ಸುಂಟಿಕೊಪ್ಪ ಪೋಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಭೇದಿಸಿದ ಕೊಡಗು ಪೊಲೀಸ್ ಆಂಧ್ರಪ್ರದೇಶದಲ್ಲಿ ಉದ್ಯಮಿ ರಮೇಶ್ ಎಂಬವರನ್ನು ಹಾಗೂ ಕೊಲೆ ಮಾಡಿ ಶವವನ್ನು ಕೊಡಗಿಗೆ ಸಾಗಿಸಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ ಮೂರು ಆರೋಪಿ ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಂದು 3 ನೇ ಆರೋಪಿ ಪಶು ವೈದ್ಯ ಮೈ ರೆಡ್ಡಿ ನಿಖಿಲ್‌ಗೆ ಮಡಿಕೇರಿ ಆಡಿಷನಲ್ ಸಿವಿಲ್ ಮತ್ತು ಜೆ.ಎಂಎಫ್‌ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ಪೊನ್ನಂಪೇಟೆಯ ವಕೀಲರಾದ ಎಂ.ಟಿ ಕಾರ್ಯಪ್ಪ ವಕಾಲತ್ತು ವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

16/11/2024 05:03 pm

Cinque Terre

420

Cinque Terre

0

ಸಂಬಂಧಿತ ಸುದ್ದಿ