ಮುಂಬೈ: ಮಹಾರಾಷ್ಟ್ರದ ಹಿಂಗೋಲಿ ವಿಧಾನಸಭಾ ಕ್ಷೇತ್ರದಲ್ಲಿ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರ ಹೆಲಿಕಾಪ್ಟರ್ ಮತ್ತು ಬ್ಯಾಗ್ಗಳನ್ನು ಚುನಾವಣಾ ಆಯೋಗ (ಇಸಿ) ಪರಿಶೀಲಿಸಿದೆ.
ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ್ದಕ್ಕಾಗಿ ಎಂವಿಎ ಚುನಾವಣಾ ಆಯೋಗವನ್ನು ಟೀಕಿಸಿತ್ತು. ಈ ಬೆನ್ನಲ್ಲೇ ಅಮಿತ್ ಶಾ ಅವರ ಹೆಲಿಕಾಪ್ಟರ್ ಮತ್ತು ಬ್ಯಾಗ್ಗಳನ್ನು ಚುನಾವಣಾ ಆಯೋಗ (ಇಸಿ) ಪರಿಶೀಲಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, "ಬಿಜೆಪಿ ನ್ಯಾಯಯುತ ಚುನಾವಣೆ ಮತ್ತು ಆರೋಗ್ಯಕರ ಚುನಾವಣಾ ವ್ಯವಸ್ಥೆಯನ್ನು ನಂಬುತ್ತದೆ ಮತ್ತು ಗೌರವಾನ್ವಿತ EC ಮಾಡಿದ ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ" ಎಂದು ಹೇಳಿದ್ದಾರೆ.
PublicNext
15/11/2024 10:00 pm