ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಕ್ಫ್ ವಿವಾದ: ನಮ್ಮ ಭೂಮಿ - ನಮ್ಮ ಹಕ್ಕು ಹೆಸರಿನಲ್ಲಿ ಮೂರು ತಂಡ ರಚಿಸಿದ ವಿಜಯೇಂದ್ರ - ತಂಡದಲ್ಲಿ ರೆಬಲ್ಸ್ ಟೀಂಗೂ ಸ್ಥಾನ..!

ಬೆಂಗಳೂರು: ಯತ್ನಾಳ್ ನೇತೃತ್ವದ ರೆಬಲ್ಸ್ ಟೀಂ ಬೀದರ್‌ನಿಂದ ಬೆಳಗಾವಿಯತನಕ ವಕ್ಫ್ ಜನಜಾಗೃತಿ ಅಭಿಯಾನ ಮಾಡಲು ಹೊರಟ ಬೆನ್ನಲ್ಲೇ ರಾಜ್ಯ ಬಿಜೆಪಿ ಮೂರು ತಂಡ ರಚಿಸಿದೆ. ವಿಶೇಷ ಅಂದ್ರೆ ಆ ತಂಡದಲ್ಲಿ ರೆಬಲ್ಸ್ ಟೀಂಗೂ ಸ್ಥಾನ ಕೊಟ್ಟಿರೋದು.

ಹೌದು.. ರಾಜ್ಯದಲ್ಲಿ ರೈತರ ಭೂಮಿ ವಕ್ಫ್ ಆಸ್ತಿ ಎಂದು ನಮೂದಾಗುತ್ತಿರುವ ಹಿನ್ನೆಲೆಯಲ್ಲಿ ಇದರ ಬಗ್ಗೆ ಆಗುತ್ತಿರುವ ಗೊಂದಲದ ಬಗ್ಗೆ ಮಾಹಿತಿ ಕಲೆ ಹಾಕಲು ಮೂರು ತಂಡಗಳನ್ನು ರಚಿಸಿದೆ ರಾಜ್ಯ ಬಿಜೆಪಿ ಘಟಕ.

ನಮ್ಮ ಭೂಮಿ - ನಮ್ಮ ಹಕ್ಕು ಎಂಬ ಘೋಷವಾಕ್ಯದಡಿ ತಂಡಗಳ ರಚಿಸಲಾಗಿದೆ, ಮೊದಲ ತಂಡಕ್ಕೆ ರಾಜ್ಯಾಧ್ಯಕ್ಷ ವಿ.ವೈ‌. ವಿಜಯೇಂದ್ರ ನಾಯಕತ್ವ

ಅವರ ತಂಡದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದ್ದಾರೆ, ಎರಡನೇ ತಂಡಕ್ಕೆ ವಿಪಕ್ಷ ನಾಯಕ ಆರ್ ಆಶೋಕ್ ನಾಯಕತ್ವ ಅವರ ತಂಡದಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಸ್ಥಾನ ಕಲ್ಪಿಸಲಾಗಿದೆ ಹಾಗೇ ಮೂರನೇ ತಂಡಕ್ಕೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಾಯಕತ್ವ ಅವರ ತಂಡದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಬಿಜೆಪಿ ಘಟಕ ರಚಿಸಿದ ತಂಡ ಹೀಗಿದೆ.

ಮೊದಲನೇ ತಂಡ ವಿಜಯೇಂದ್ರ ನೇತೃತ್ವದಲ್ಲಿ

ಬಿ.ವೈ.ವಿಜಯೇಂದ್ರ.

ಪ್ರಹ್ಲಾದ್ ಜೋಶಿ.

ಜಗದೀಶ್ ಶೆಟ್ಟರ್.

ಭಗವಂತ ಖೂಬಾ.

ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್.

ಮುರುಗೇಶ್ ನಿರಾಣಿ.

ರಮೇಶ್ ಜಾರಕಿಹೊಳಿ.

ಈರಣ್ಣಾ ಕಡಾಡಿ.

ಹಾಲಪ್ಪ ಆಚಾರ್.

ಸುನಿಲ್ ವಲ್ಯಾಪುರೆ.

ಎಂ.ಬಿ. ಜಿರಲಿ

ಶ್ರೀರಾಮುಲು

ಮೊದಲ ತಂಡದಿಂದ ಕಲ್ಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಪರಿಶೀಲನೆ.

ಎರಡನೇ ತಂಡ ಆರ್.ಅಶೋಕ್ ನೇತೃತ್ವದ್ದಲ್ಲಿ

1. ಆರ್.ಅಶೋಕ್.

2. ಬಸವರಾಜ ಬೊಮ್ಮಾಯಿ.

3. ಶೋಭಾ ಕರಂದ್ಲಾಜೆ.

4. ಬಸನಗೌಡ ಪಾಟೀಲ್ ಯತ್ನಾಳ್.

5. ರಾಜೂಗೌಡ.

6. ಎಂ.ಪಿ.ರೇಣುಕಾಚಾರ್ಯ.

7. ಎನ್.ಮಹೇಶ್.

8. ದೊಡ್ಡನಗೌಡ ಪಾಟೀಲ್.

9. ಭಾರತಿ ಶೆಟ್ಟಿ.

10. ಡಾ.ಬಿ.ಸಿ. ನವೀನ್‌ಕುಮಾರ್

11. ವಸಂತ್‌ಕುಮಾರ್.

ಎರಡನೇ ತಂಡ - ಚಾಮರಾಜನಗರ. ಮೈಸೂರು ನಗರ, ಮೈಸೂರು ಗ್ರಾಮಾಂತರ.

ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪರಿಶೀಲನೆ.

ಮೂರನೇ ತಂಡ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ

ಛಲವಾದಿ ನಾರಾಯಣ ಸ್ವಾಮಿ

ಡಿವಿ ಸದಾನಂದ ಗೌಡ

ವಿ .ಸೋಮಣ್ಣ

ಸಿಟಿ ರವಿ

ನಳೀನ್ ಕುಮಾರ್ ಕಟೀಲ್

ಅರವಿಂದ್ ಲಿಂಬಾವಳಿ

ಮುನಿಸ್ವಾಮಿ

ಆರಗ ಜ್ಞಾನೇಂದ್ರ

ಬಿಸಿ ಪಾಟೀಲ್

ವೈ ಎ ನಾರಾಯಣಸ್ವಾಮಿ

ವಿವೇಕ್ ಸುಬ್ಬಾರೆಡ್ಡಿ

ಮೂರನೇ ತಂಡ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಧುಗಿರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಹುಬ್ಬಳ್ಳಿಯಲ್ಲಿ ಪರಿಶೀಲನೆ

Edited By : Vijay Kumar
PublicNext

PublicNext

15/11/2024 08:13 pm

Cinque Terre

15.43 K

Cinque Terre

0

ಸಂಬಂಧಿತ ಸುದ್ದಿ