ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾವಿಕಾ ಸಗಡಿ ಮೈತ್ರಿ ಕೂಟ ಅಧಿಕಾರಕ್ಕೆ : ಲೋಕಪೋಲ್‌ ಸಮೀಕ್ಷೆ!

ಮುಂಬೈ : ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯತ್ತ ಇಡೀ ದೇಶದ ಗಮನ ನೆಟ್ಟಿದೆ. ಸದ್ಯ ಮಹಾರಾಷ್ಟ್ರದಲ್ಲಿ ಯಾರು ಅಧಿಕಾರಕ್ಕೆ ಹೇರಲಿದ್ದಾರೆ ಎನ್ನುವ ಬಗ್ಗೆ ಲೋಕ ಪೋಲ್ ಚುನಾವಣೆ ಪೂರ್ವ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್‌ 20ಕ್ಕೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿ ಮಹಾವಿಕಾಸ್‌ ಅಘಾಡಿ ಹಾಗೂ ಮಹಾಯುತಿ ನಡುವೆ ನೇರ ಹಣಾಹಣಿ ಇದೆ.

ಶಿವಸೇನಾ ಹಾಗೂ ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಗಳು ಇಬ್ಭಾಗವಾದ ಮೇಲೆ ಇದೇ ಮೊದಲ ಬಾರಿ ಚುನಾವಣೆಯನ್ನು ಎದುರಿಸುತ್ತಿವೆ. ಅಲ್ಲದೇ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ತೀವ್ರ ಪೈಪೋಟಿ ಇದೆ. ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಹೇರುವುದಕ್ಕೆ ದೊಡ್ಡ ಪಕ್ಷಗಳಿಗಿಂತಲೂ ಸಣ್ಣ ಪಕ್ಷಗಳ ಪೈಪೋಟಿ ತೀವ್ರವಾಗಿ ಇದೆ.

10ಕ್ಕೂ ಹೆಚ್ಚು ಸಣ್ಣ ಪಕ್ಷಗಳು ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಇವೆ.

ಲೋಕಪೋಲ್‌ನ ಸಮೀಕ್ಷೆ ವರದಿಯ ಪ್ರಕಾರ, ಈ ಬಾರಿ ರಾಜ್ಯದಲ್ಲಿ ಮಹಾಯುತಿ (ಬಿಜೆಪಿ ಮೈತ್ರಿಕೂಟ)ಗೆ 115ರಿಂದ 128 ಸ್ಥಾನಗಳು ಸಿಗಲಿವೆ. ಮಹಾ ವಿಕಾಸ್‌ ಅಘಾಡಿ (ಕಾಂಗ್ರೆಸ್‌ ನೇತೃತ್ವ)ಕ್ಕೆ 151ರಿಂದ 162 ಸೀಟುಗಳು ಸಿಗಲಿವೆ. ಇನ್ನುಳಿದಂತೆ ಇತರರಿಗೆ 5ರಿಂದ 14 ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷಾ ವರದಿ ಹೇಳಿದೆ.

* MahaYuti 115 - 128

* MVA 151 - 162

* Others 05 - 14

ಮಹಾರಾಷ್ಟ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ 300 (ಜನರಿಂದ) ಮಾದರಿಗಳನ್ನು ಸಂಗ್ರಹಿಸಿ, ಒಟ್ಟು 86,400 ಮಾದರಿಗಳ ಆಧಾರದ ಮೇಲೆ ಈ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಲಾಗಿದೆ.

ಕಾಂಗ್ರೆಸ್‌ಗೆ ಅಧಿಕಾರ : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ. ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು, 145 ಬಹುಮತವಾಗಿದೆ. ಮಹಾವಿಕಾಸ್‌ ಅಘಾಡಿಯು 151ರಿಂದ 162 ಸೀಟ್‌ಗಳಲ್ಲಿ ಗೆಲ್ಲಲಿದ್ದು, ಬಹುಮತ ಕ್ರಾಸ್‌ ಮಾಡಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ.

Edited By : Nirmala Aralikatti
PublicNext

PublicNext

14/11/2024 11:00 pm

Cinque Terre

20.26 K

Cinque Terre

6