ಬೆಂಗಳೂರು : ಸಚಿವ ಜಮೀರ್ ಅಹಮದ್ ಹೇಳಿಕೆಯಿಂದ ನನಗೆ ಒಕ್ಕಲಿಗ ಮತಗಳು ಬಂದಿಲ್ಲ, ಅನ್ನಿಸುತ್ತೆ ಎಂದು ನಿನ್ನೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿಪಿ ಯೋಗೇಶ್ವರ್ ಹೇಳಿಕೆ ಕೊಟ್ಟಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಡಿಕೆ ಸುರೇಶ್, ಚುನಾವಣೆಯಲ್ಲಿ ತಂತ್ರಗಾರಿಗೆ ಬಹಳ ಮುಖ್ಯ ಪಾತ್ರ ವಹಿಸುತ್ತೆ ನಮ್ಮ ಕಾರ್ಯಕರ್ತರು ಮುಖಂಡರು ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದಾರೆ. ಯೋಗೇಶ್ವರ್ ಯಾವ ಆಯಾಮದಲ್ಲಿ ಹೇಳಿದ್ದಾರೆ ಗೊತ್ತಿಲ್ಲ, ಆದ್ರೆ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರಲಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹ್ಮದ್ ಅಹಮದ್ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ ಪಕ್ಷದ ಹೇಳಿಕೆಯಲ್ಲ. ಜಮೀರ್ ಹೇಳಿಕೆ ಹೊಸದೇನಲ್ಲ,ಮಾಧ್ಯಮಗಳ ಮುಖಾಂತರ ಪರಿಣಾಮ ಬೀರಿದೆ ಅಷ್ಟೇ, ಅವರು ಹೊಸದಾಗಿ ಹೇಳಿಕೆ ನೀಡಿದ್ರೆ ಒಪ್ಪಬಹುದಿತ್ತು ಆದ್ರೆ ಅವರ ಸಾಕಷ್ಟು ಬಾರಿ ಆಡಿದ್ದಾರೆ.
ಮಾಧ್ಯಮಗಳು ನಿಷ್ಪಕ್ಷಪಾತ ಕೆಲಸ ಮಾಡಬೇಕಿತ್ತು. ನಮ್ಮ ಪಕ್ಷದ ಮೇಲೆ ಯಾಕೆ ಕೋಪ ಇದೆ ಅಂತ ಗೊತ್ತಿಲ್ಲ,ಚುನಾವಣಾ ದೃಷ್ಟಿಯಿಂದ ಮಾಧ್ಯಮದಲ್ಲಿ ಚರ್ಚೆ ಮಾಡಿದ್ದೀರಾ? ಮಾಧ್ಯಮಗಳು ಮಾಡಿದ ಸೃಷ್ಟಿ ಇದು ಎಂದು ಡಿಕೆ ಸುರೇಶ್ ಹರಿಹಾಯ್ದಿದ್ದಾರೆ.
ಅದೇ ಡಿಕೆ ಶಿವಕುಮಾರ್ ರನ್ನು ಕಳ್ಳ ಅಂತಾ ಎಂದಾಗ ಏನು ಮಾತನಾಡಲಿಲ್ಲ, ಮಾತನಾಡುವಾಗ ಕೆಲವೊಂದು ತಪ್ಪುಗಳಾಗುತ್ತೆ ಸಚಿವ ಜಮೀರ್ ಹೇಳಿಕೆಯನ್ನು ಸ್ವಲ್ಪ ತಿರುಚಲಾಗಿದೆ.
ಜನರಿಗೆ ಹಣ, ಧರ್ಮ ಎರಡೇ ಬೇಕಾಗಿರುವುದು, ಕೆಲಸ ಮಾಡಿದ್ದೇವೆ ವೋಟು ಹಾಕಿ ಅಂತಾ ಕೇಳುವ ಪರಿಸ್ಥಿತಿಯಲ್ಲಿ ರಾಜಕಾರಣಿಗಳು ಇಲ್ಲ. ಇಲ್ಲಿ ಕೆಲಸಕ್ಕೆ ಬೆಲೆ ಇಲ್ಲ,ಜನಕ್ಕೆ ಹಣ ಮತ್ತು ಧರ್ಮ ಎರಡೇ ಬೇಕಾಗಿರುವುದು ಇದು ಸತ್ಯವಾದ ಮಾತು, ಒಂದೋ ಸುಳ್ಳು ಹೇಳೋದನ್ನು ಕಲಿತುಕೊಳ್ಳಬೇಕು, ಬೆಳಗ್ಗೆ ಒಂದು ಸುಳ್ಳು ಮಧ್ಯಾಹ್ನ ಒಂದು ಸುಳ್ಳು ಇದು ನನ್ನ ಹೇಳಿಕೆಯಲ್ಲ, ಜನರ ಅಭಿಪ್ರಾಯ, ನನ್ನ ನೋವಿನ ನುಡಿ ಜಾತಿ ಹೇಳಬೇಕು, ಸುಳ್ಳು ಹೇಳಬೇಕು ಇಷ್ಟೇ ಎಂದರು.
PublicNext
15/11/2024 02:16 pm