ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಟಿಕೆಟ್‌ಗಾಗಿ ಬಸ್ ನಿಲ್ಲಿಸಿದ್ದಕ್ಕೆ ಆಕ್ರೋಶ, ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳು…!

ಶಿರಹಟ್ಟಿ: ಪಟ್ಟಣದಿಂದ ಲಕ್ಷ್ಮೇಶ್ವರ ಹೋಗುತ್ತಿರುವ ಬಸ್ ಫುಲ್ ರಶ್ ಇತ್ತು. ಆದ ಕಾರಣ ನಿರ್ವಾಹಕ ಟಿಕೆಟ್ ಮಾಡಲು ಬಸ್ ನಿಲ್ಲಿಸಿದ ಕಾರಣಕ್ಕೆ ಕೆಲವು ಕಿಡಿಗೇಡಿಗಳು ನಿರ್ವಾಹಕನ ಮೇಲೆ ಏಕಾಏಕಿ ಮುಗಿಬಿದ್ದು ಹೊಡೆದಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ನಗರದ ಡಬಾಲಿ ಹೈಸ್ಕೂಲ್ ಹತ್ತಿರ ಈ ಘಟನೆ ನಡೆದಿದೆ. ಯಾಕೆ ಬಸ್ ನಿಲ್ಲಿಸಿದ್ರಿ ಎಂದು ವಾಗ್ವಾದ ಮಾಡುತ್ತಾ ಬಸ್ ಬಾಗಿಲ ಬಳಿ ನಿಂತು ಕಂಡಕ್ಟರ್ ಕೃಷ್ಣಾ ನಾಯಕನನ್ನು ಎಳೆದು ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ನಿರ್ವಾಹಕ ಕೃಷ್ಣಾ ನಾಯಕ್ ಅವರಿಗೆ ತಲೆ, ಕತ್ತಿನ ಭಾಗಕ್ಕೆ ಎದೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಗಾಯಾಳು ಕಂಡಕ್ಟರ್ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

ಜಿಲ್ಲೆಯಲ್ಲಿ ಸಾರಿಗೆ ನೌಕರರಿಗೆ ರಕ್ಷಣೆ ಎಲ್ಲಿದೆ ಎಂದು ಚಾಲಕರು, ನಿರ್ವಾಹಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಜೊತೆಗೆ ತಮಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

-ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ

Edited By : Shivu K
PublicNext

PublicNext

14/11/2024 07:56 pm

Cinque Terre

29.07 K

Cinque Terre

2