ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ

ಶಿರಹಟ್ಟಿ: ಇತ್ತೀಚಿಗೆ ದಿನಗಳಲ್ಲಿ ಸಂಚರಿಸುವ ಕುರಿಗಾಹಿಗಳು ನಮ್ಮ ಕುರಿಗಳು ಕಳ್ಳತನವಾಗುತ್ತಿವೆ ಎಂದು ಶಿರಹಟ್ಟಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಕೆಲವೇ ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ಠಾಣೆಯ ಪಿಎಸ್‌ಐ ಚನ್ನಯ್ಯ ದೇವೂರ ಅವರು, 'ನಮ್ಮ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 20 ಕುರಿಗಳು ಪತ್ತೆ ಮಾಡಲಾಗಿದೆ ಎಂದರು.

ಸಿಪಿಐ ನಾಗರಾಜ ಎಮ್ ಮಾಡಳ್ಳಿ ಅವರ ನೇತೃತ್ವದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ಈ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಸಿಬ್ಬಂದಿಯನ್ನು ಗದಗ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಮ್ ಬಿ ಸಂಕದ ಹಾಗೂ ಉಪ-ಅಧೀಕ್ಷಕ ಜೆ ಎಚ್ ಇನಾಮ್‌ದಾರ ಶ್ಲಾಘಿಸಿದ್ದಾರೆ.

ಈ ಸಂದರ್ಭದಲ್ಲಿ ಶಿರಹಟ್ಟಿ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮಾಡೊಳ್ಳಿ, ಕ್ರೈಂ ಪಿಎಸ್‌ಐ ಎಸ್ ಟಿ ಕಡಬಿನ ಹಾಗೂ ಸಿಬ್ಬಂದಿಗಳಾದ ಎಎಸ್‌ಐ ಶಿರಹಟ್ಟಿ ವೃತ್ತ ಹೆಚ್ ಜಿ ಲಕ್ಷ್ಮೇಶ್ವರ, ಸಿಎಚ್‌ಸಿ ಆರ್ ಎಸ್ ಕಪ್ಪತ್ತನವರ ಆರ್ ಎಸ್ ಯರಗಟ್ಟಿ, ಸಿಪಿಸಿ ಹನುಮಂತ ಸಿ ದೊಡ್ಡಮನಿ, ಬಿ ಜೆ ಮುಳಗುಂದ, ಆರ್ ಎಚ್ ಮುಲ್ಲಾ, ಎನ್ ಕಾರಭಾರಿ, ಆರ್ ವಿ ವೀರಾಪುರ, ಸಿ ಸಿ ಗುಂಡೂರಮಠ,ಎಪಿಸಿ ಮಲ್ಲಿಕಾರ್ಜುನ ವಡ್ಡರ ಟಿ, ಟೆಕ್ನಿಕಲ್ ಸೆಲ್ ಕುಮಾರಿ ಕೆ.ಎನ್ ಕೂಬಿಹಾಳ ಹಾಗೂ ಎಆರ್‌ಎಸ್‌ಐ ಶ್ರೀಗುರು ಬೂದಿಹಾಳ, ಸಿಡಿಆರ್ ಸಂಜೀವ್ ಕೊರಡೂರ ವಿಭಾಗರವರನ್ನೊಳಗೊಂಡ ತಂಡವು ಪತ್ತೆ ಮಾಡಿದ್ದಾರೆ.

Edited By : Vijay Kumar
Kshetra Samachara

Kshetra Samachara

22/11/2024 05:31 pm

Cinque Terre

15.56 K

Cinque Terre

0

ಸಂಬಂಧಿತ ಸುದ್ದಿ