ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಬ್ಬರು ಕಳ್ಳಿಯರನ್ನು ಬಂಧಿಸಿದ ಲಕ್ಷ್ಮೇಶ್ವರ ಪೊಲೀಸರು.

ಗದಗ.

ಬಂಗಾರದ ಆಭರಣಗಳನ್ನು ಕಳವು ಮಾಡಿದ್ದ ಇಬ್ಬರು ಮಹಿಳಾ ಕಳ್ಳಿಯರನ್ನು ಬಂದಿಸುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲ್ಲಾ ಎಸ್ ಪಿ,ಹೆಚ್ಚುವರಿ ಎಸ್ ಪಿ,ಡಿ ಎಸ್ ಪಿ,ಅವರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ ನೇತ್ರತ್ವದಲ್ಲಿ ತಂಡ ರಚಿಸಿ ಕಳ್ಳಿಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು.

ಭದ್ರಾವತಿಯ ಶಾಂತಿ ವಡ್ಡರ,ಸುಶೀಲಮ್ಮಾ ವಡ್ಡರ ಎಂಬ ಆರೋಪಿಗಳಿಂದ ಬಂಗಾರದ ಚೈನ್, ಸೇರಿದಂತೆ ಒಟ್ಟು 2,60,000ಕಿಮ್ಮಿತ್ತಿನ 55ಗ್ರಾಂ ಬಂಗಾರದ ಆಭರಣಗಳನ್ನು ಪತ್ತೆ ಮಾಡಿದ್ದು, ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ, ಪಿ ಎಸ್ ಐ ನಾಗರಾಜ ಗಡಾದ, ಅಪರಾಧ ವಿಭಾಗದ ಪಿ ಎಸ್ ಐ, ಟಿ ಕೆ ರಾಠೋಡ, ಎ ಎಸ್ ಐ,ಎನ್ ಎ ಮೌಲ್ವಿ, ಗುರು ಬೂದಿಹಾಳ, ಎಮ್ ಎಮ್ ಶೀಗಿಹಳ್ಳಿ, ಆರ್ ಎಸ್ ಯರಗಟ್ಟಿ,ಎಮ್ ಎ ಶೇಖ, ಎಮ್ ಎಸ್ ಬಳ್ಳಾರಿ, ಎ ಆರ್ ಕಮ್ಮಾರ, ಸಿ ಎಸ್ ಮಠಪತಿ, ಡಿ ಎಸ್ ನದಾಫ, ಎಚ್ ಐ ಕಲ್ಲಣ್ಣವರ,ಪಾಂಡುರಂಗರಾವ್, ಮಧುಚಂದ್ರ ಧಾರವಾಡ, ನಂದಯ್ಯ ಮಠಪತಿ,ಸೋಮು ವಾಲ್ಮೀಕಿ, ಸಂಜೀವ ಕೊರಡೂರ, ವಿದ್ಯಾಶ್ರೀ ಹದ್ಲಿ,ಇವರುಗಳ ಉತ್ತಮ ಕಾರ್ಯಕ್ಕೆ ಜಿಲ್ಲೆ ಎಸ್ ಪಿ ಬಿ ಎಸ್ ನೇಮಗೌಡ,ಹೆಚ್ಚುವರಿ ಎಸ್ ಪಿ,ಡಿ ಎಸ್ ಪಿ,ಶಿರಹಟ್ಟಿ ಸಿಪಿಐ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Edited By : PublicNext Desk
Kshetra Samachara

Kshetra Samachara

27/11/2024 04:20 pm

Cinque Terre

127.06 K

Cinque Terre

0

ಸಂಬಂಧಿತ ಸುದ್ದಿ