ಗದಗ.
ಸರ್ಕಾರವು ರಾಜ್ಯದ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು.ಅಭಿವೃದ್ಧಿ ಪರ ಯೋಜನೆಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಸಿಎಂ ಸಿದ್ದರಾಮಯ್ಯ ಅವರ ಎರಡು ವರ್ಷದ ಆಡಳಿತದಲ್ಲಿ ತೃಪ್ತಿ ಕಂಡಿಲ್ಲ.ಅಭಿವೃದ್ಧಿ ಕೆಲಸಗಳಿಗೆ ನನ್ನ ಆತ್ಮಕ್ಕೆ ಕೆಲಸವೇ ಸಾಕ್ಷಿ
ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ರೋಣ ತಾಲೂಕಿನ ಬೆಳವಣಿಕೆಯಿಂದ ದಾಟನಾಳ ಗ್ರಾಮದ ವರೆಗೂ 3.05 ಕಿ.ಮೀ ರಷ್ಟು ಅಂದಾಜು 10 ಕೋಟಿ ರೂ.ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಬಿ.ಎಸ್.ಬೇಲೆರಿ ಗ್ರಾಮದಲ್ಲಿ ಅಂದಾಜು 10 ಲಕ್ಷ ರೂ ವೆಚ್ಚದಲ್ಲಿ ಶ್ರೀ ಮಾರುತೇಶ್ವರ ಸಮುದಾಯ ಭವನದ ಕಟ್ಟಡದ ಭೂಮಿ ಪೂಜೆ ನೇರವೇರಿಸಿ ಮಾತನಾಡಿ ರಾಜ್ಯ ಸರ್ಕಾರವು ರಾಜ್ಯದ ಅಭಿವೃದ್ಧಿ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ನೀಡಬೇಕು.ಗ್ರಾಮೀಣ ಪ್ರದೇಶಗಳಿಗೆ ಅನುದಾನ ಬಿಡುಗಡೆ ಮಾಡಬೇಕು.ಗ್ರಾಮದ ಅಭಿವೃದ್ಧಿ ಗ್ರಾಮಸ್ಥರ ಸಹಕಾರ ಬಹಳ ಮುಖ್ಯ
ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ ಅಧಿಕಾರವೇ ಕಾಂಗ್ರೆಸ್ ಮೂಲ ಮಂತ್ರ,ಮೀಸಲಾತಿ ವಿಷಯದಲ್ಲಿ ಎಸ್.ಸಿ,ಎಸ್.ಟಿ ಜನಾಂಗದವರಿಗೆ ಅನ್ಯಾಯ ಮಾಡಿದೆ.ರಾಜ್ಯ ಸರ್ಕಾರದ ಜನಪರ ಯೋಜನೆಯನ್ನು ಜಾರಿಗೆ ತರದೇ ಅಧಿಕಾರ ನಡೆಸುತ್ತಾ ಬಂದಿರುವುದು ವಿಷಾದದ ಸಂಗತಿ.ಜನಸಾಮಾನ್ಯರ ಆಶಯಗಳಿಗೆ ಸ್ಪಂದಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಬಿಂಗಿ,ಲೋಕೋಪಯೋಗಿ
ಇಲಾಖೆ ಅಧಿಕಾರಿ ಬಲವಂತಪ್ಪ ನಾಯಕ,ಎ.ಈ.ಕರಡ್ಡಿ
ಮುತ್ತಣ್ಣ ಜಂಗಣ್ಣವರ,ಆಶೋಕ ನವಲಗುಂದ, ಸುಭಾಶ ಹೊಸಂಗಡಿ,ವೀರಪ್ಪ ತಾಳಿ,ಬಾಬು ಕಡದಳ್ಳಿ,ವೀರನಗೌಡ ಪಾಟೀಲ,ಶಿವಪ್ಪ ಹಾಲಬಾವಿ,ಸೋಮು ಗಾಡಗೋಳಿ,ಶರಣು ಭರಶೆಟ್ಟಿ,ಸೋಮು ಚೇರದ,ಬಸವಂತಪ್ಪ ತಳವಾರ,ಮುದಿಯಪ್ಪ ಮಾದರ,ರಾಮನಗೌಡ ಪಾಟೀಲ,ಅಶೋಕ ಹೆಬ್ಬಳ್ಳಿ, ಪಡಿಯಪ್ಪ ಮಾದರ, ವಸಂತರಾವ್ ಕುಲಕರ್ಣಿ, ನಿಂಗಪ್ಪ ಮೇಟಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
Kshetra Samachara
30/11/2024 04:56 pm