ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಶಾಲೆಯಲ್ಲಿ ಹಳ್ಳಿಯ ಸೊಗಡಿನ ಚಿತ್ರಣವನ್ನು ಸೃಷ್ಟಿಸಿದ ಮಕ್ಕಳು

ಶಿರಹಟ್ಟಿ: ಗದಗ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಶಾಲೆಯೊಂದರಲ್ಲಿ ಈ ರೀತಿಯ ವಿಶಿಷ್ಟ ಕಾರ್ಯಕ್ರಮ ಮಾಡಿದ ಕೀರ್ತಿ ಶಿರಹಟ್ಟಿ ಪಟ್ಟಣದ ಮೇಗೇರಿ ಓಣಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸಲ್ಲಿಸುತ್ತದೆ.

ಇಂದು ಪಟ್ಟಣದ ಮೇಗೇರಿ ಓಣಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಿಣ ಸೊಗಡು ಕಾರ್ಯಕ್ರಮವನ್ನು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ನಾಣಕೀ ನಾಯಕ್ ಅವರು ಉದ್ಘಾಟಿಸಿದರು. ನಂತರ ಮಕ್ಕಳು ಮಾಡಿರುವ ಹಳ್ಳಿಯ ಸೊಗಡಿನ ದೃಶ್ಯಗಳು ನೋಡಿ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬಂತು ಎಂದು ಹೇಳಿದರು.

ಇಲ್ಲಿ ಹಳ್ಳಿ ಹಳ್ಳಿಗಳಲ್ಲಿ ನೆಡೆಯುವ ಪ್ರತಿ ಚಟುವಟಿಕೆಯ ದೃಶ್ಯಗಳನ್ನು ಮಾಡಲಾಗಿದೆ. ಅವು ಈ ಕೆಳಗಿನಂತಿವೆ ಬೀಸುವುದು, ಕುಟ್ಟುವುದು, ಹಸನು ಮಾಡುವುದು, ರೊಟ್ಟಿ ತಟ್ಟುವುದು, ಬಳೆ ಇಡುವುದು, ಮಜ್ಜಿಗೆ ಕಡಿಯುವುದು, ಹಾಲು ಮಾರುವುದು, ಶಾವಿಗೆ ಹೊಸೆಯುವುದು, ಕೌದಿ ಹೊಲೆಯುವುದು, ಹಳ್ಳಿ ಪಂಚಾಯತಿ ಕಟ್ಟೆ, ಲಂಬಾಣಿ ಸಂಸ್ಕೃತಿ ಹೇಳಿಕೆ ಹೇಳುವುದು, ಬೆರಣಿ ತಟ್ಟುವುದು ಸೆಗಣಿಯಿಂದ ಸಾರಿಸುವುದು, ಕುರಿ ಕಾಯುವುದು, ಬಾವಿಯಿಂದ ನೀರು ತರುವುದು, ಬಂಗಾರದ ಮನುಷ್ಯ, ರೈತರು ಹೊಲದಲ್ಲಿ ಮಾಡುವ ಎಲ್ಲ ಕೆಲಸಗಳನ್ನ ಎತ್ತು ಚಕ್ಕಡಿ ಮೂಲಕ ರೂಪಕ ಬಿತ್ತರಿಸಿದರು.

ಗದಗ ಜಿಲ್ಲೆಯ ಉಪನಿರ್ದೇಶಕರಾದ ಆರ್ ಎಸ್ ಬುರಡಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ, ಹಳ್ಳಿಯ ಸೊಗಡಿನ ರೂಪಕಗಳನ್ನು ವೀಕ್ಷಿಸಿ ಮಕ್ಕಳ ಜೊತೆ ಬೆರೆತು ಗ್ರಾಮೀಣ ಸೊಗಡಿನ ಮಹತ್ವ ತಿಳಿಸಿದರು.

ಈ ಸಂದರ್ಭದಲ್ಲಿ ಬಿ ಆರ್ ಪಿ ಸಮನ್ವಯಾಧಿಕಾರಿಗಳು / ಸಿಆರ್‌ಪಿ, ಎನ್.ಎಮ್ ಸಾವಿರಕುರಿ, ಮಾಗಡಿ ಸಿ ಆರ್ ಪಿ ಕಂಬಳಿ ಮೇಡಂ, ಪಟ್ಟಣ ಪಂಚಾಯಿತಿ ಸದಸ್ಯರ, ಶಾಲೆಯ ಪ್ರಧಾನ ಗುರುಗಳು ಮತ್ತು ಸರ್ವ ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು ಮತ್ತು ಪಾಲಕರು ಪೋಷಕರು ಗುರುಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ

Edited By : Suman K
Kshetra Samachara

Kshetra Samachara

23/11/2024 12:19 pm

Cinque Terre

6.2 K

Cinque Terre

0

ಸಂಬಂಧಿತ ಸುದ್ದಿ