ಬೆಂಗಳೂರು: ಶಾಸಕರನ್ನ ಬಿಜೆಪಿ 50 ಕೋಟಿಗೆ ಆಫರ್ ಮಾಡ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ. ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರನ್ನ ಖರೀದಿ ಮಾಡಲು ನಿಮ್ಮ MLA ಗಳು ಕತ್ತೆನೋ, ಕುದುರೇನೋ ,ದನನೋ ಎಂದು ಬಿಜೆಪಿ ಮುಖಂಡ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದೀರಾ, ನೀವು ಹೇಳಿದ್ದಿರಾ ಬಿಜೆಪಿ ಅವರು 50 ಕೋಟಿ ಕೊಟ್ಟು ಖರೀದಿ ಮಾಡಲು ಹೊರಟಿದೆ ಅಂತ. ಹಾಗಿದ್ರೆ ನಿಮ್ಮ ಪಕ್ಷದ ಶಾಸಕರು ಅಷ್ಟು ದುರ್ಬಲರಾ ?ಈ ಖರೀದಿ ಮಾಡಲು ನಿಮ್ಮ ಶಾಸಕರು ಕುದುರೆನೋ, ಕತ್ತೆನೋ.. ದನಾನೋ ಆದ್ರೆ ಖರೀದಿ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ. ಬದ್ಧತೆ ಇರೋ ಯಾವುದೇ ಶಾಸಕರನ್ನ ಖರೀದಿ ಮಾಡಲು ಸಾಧ್ಯವಿಲ್ಲ ನಿಮ್ಮ ಆರೋಪ ಆಧಾರ ಇಲ್ಲದ ಆರೋಪ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಯಾರು, ಯಾವಾಗ, ಯಾರನ್ನ ಖರೀದಿ ಮಾಡಲು ಪ್ರಯತ್ನ ಪಟ್ರು ? ಆಧಾರ ಇದ್ರೆ ದೂರು ನೀಡಿ. ಸಾಕ್ಷಿ ಇದ್ರೆ ಆಧಾರ ಸಹಿತವಾಗಿ ನ್ಯಾಯಾಲಯ ಮುಂದೆ ನಿರೂಪಿಸಿ. ಸಿಎಂ ಸ್ಥಾನದಲ್ಲಿ ಇದ್ದು ಆ ಸ್ಥಾನ ಜವಾಬ್ದಾರಿ ಮರೆತು ಕೇವಲ ಆರೋಪ ಮಾಡೋದು ರಾಜಕೀಯ ಪ್ರೇರಿತ ಎಂದರು.
ಬಿಜೆಪಿ ವಿರುದ್ಧ ತಪ್ಪು ಅಭಿಪ್ರಾಯ ರೂಪಿಸಲು ಮಾಡ್ತಿರೋ ಆರೋಪ ಅನಿಸುತ್ತೆ, ದಿನನಿತ್ಯ ಸುಳ್ಳು ಹೇಳೋದು ನಿಮ್ಮ ರಾಜಕೀಯದ ಭಾಗವಾಗಿದೆ. ಸುಳ್ಳು ಹೇಳದೆ ಇದ್ರೆ ನಿಮಗೆ ಊಟವೂ ಜೀರ್ಣ ಆಗಲ್ಲ. ರಾತ್ರಿ ನಿದ್ದೆಯೂ ಬರಲ್ಲ ಅನ್ನಿಸುತ್ತೆ. ಸುಳ್ಳಿನಿಂದಲೇ ರಾಜಕೀಯ ಆರಂಭ ಆಗಿ.. ಸುಳ್ಳಿನಿಂದಲೇ ನಿಮ್ಮ ದಿನಚರಿ ಅಂತ್ಯ ಆಗೋ ರೀತಿ ಇದೆ ಎಂದು ಕಿಡಿ ಕಾರಿದರು. ನಿಮ್ಮ ಹತ್ರ ಸಾಕ್ಷಿ ಇದ್ರೆ ನಿರೂಪಿಸಿ ಇಲ್ಲ ಅಂದ್ರೆ ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಸಿ.ಟಿ. ರವಿ ಆಗ್ರಹಿಸಿದ್ದಾರೆ.
PublicNext
14/11/2024 02:04 pm