ಚಿಕ್ಕಮಗಳೂರು: ಮೆಸ್ಕಾಂ ಚಿಕ್ಕಮಗಳೂರು ನಗರ ಉಪವಿಭಾಗ ಘಟಕ-3 ರ ವ್ಯಾಪ್ತಿಯಲ್ಲಿ ಬರುವ ಗೌರಿಕಾಲುವೆ ವಾಟರ್ ಟ್ಯಾಂಕ್ ಹತ್ತಿರ ರಂಗಮಂದಿರದಲ್ಲಿ ನವೆಂಬರ್ 16 ರಂದು ಬೆಳಿಗ್ಗೆ 11.00 ಗಂಟೆಗೆ ಮಾಸಿಕ ಗ್ರಾಹಕರ ಸಂವಹನ ಸಭೆ ನಡೆಯಲಿದ್ದು, ಮೆಸ್ಕಾಂನ ಹಿರಿಯ ಅಧಿಕಾರಿಗಳು ಖುದ್ದು ಹಾಜರಿರುತ್ತಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಸಾರ್ವಜನಿಕರು ನಗರ ಉಪವಿಭಾಗಕ್ಕೆ ಸಂಬಂಧಿಸಿದ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಬಹುದಾಗಿರುತ್ತದೆ. ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂನ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
14/11/2024 12:43 pm